Ad Widget .

ದ.ಕ ಜಿಲ್ಲೆಯ ಈ ಮತಗಟ್ಟೆಯಲ್ಲಿ ಶೇ.100 ಮತದಾನ| ದೇಶಕ್ಕೆ ಮಾದರಿಯಾದ ಕುಗ್ರಾಮದ ಮತದಾರರು

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಎರಡನೇ ಹಂತದ (ಕರ್ನಾಟಕದಲ್ಲಿ ಮೊದಲ ಹಂತ) ಮತದಾನ ಇಂದು ನಡೆಯುತ್ತಿದ್ದು ದ.ಕ ಜಿಲ್ಲೆಯ ಬೆಳ್ತಂಗಡಿ
ತಾಲೂಕಿನ ನೆರಿಯ ಗ್ರಾಮದ ಬಾಂಜಾರು ಮಲೆಯಲ್ಲಿ ಶೇ.100 ಮತದಾನವಾಗಿದೆ.

Ad Widget . Ad Widget .

ದ.ಕ‌ ಜಿಲ್ಲೆಯ ಅತ್ಯಂತ ಕುಗ್ರಾಮವಾಗಿರುವ ಬಾಂಜಾರು ಮಲೆಯ ಸಮುದಾಯ ಭವನದಲ್ಲಿ ನಡೆದ ಮತದಾನದಲ್ಲಿ ಎಲ್ಲರೂ ತಮ್ಮ ಹಕ್ಕುಗಳನ್ನು ಚಲಾಯಿಸಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ನೂರು ಶೇಖಡಾ ಮತದಾನವಾದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

Ad Widget . Ad Widget .

ಬಾಂಜಾರು ಮಲೆ ಮತಗಟ್ಟೆಯಲ್ಲಿ 4 ಗಂಟೆಯ ಸುಮಾರಿಗೆ ಶೇ.100 ಮತದಾನವಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಗಿಯಲಿದೆ. ಇನ್ನೂ ಸಮಯವಿದ್ದು, ಎರಡು ಗಂಟೆ ಮೊದಲೇ ಈ ಮತಗಟ್ಟೆಯಲ್ಲಿ ಶೇ.100 ಮತದಾನ ದಾಖಲಾಗಿದೆ. ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾರರಿರುವ ಮತಗಟ್ಟೆ ಇದಾಗಿದ್ದು. ಇಲ್ಲಿ 111 ಮತದಾರರಿದ್ದು ಎಲ್ಲರೂ ಇಲ್ಲಿ ಮತ ಚಲಾಯಿಸಿದ್ದಾರೆ.

Leave a Comment

Your email address will not be published. Required fields are marked *