Ad Widget .

ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್

ಸಮಗ್ರ ನ್ಯೂಸ್‌ : ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಆರ್ಸಿಬಿ 35 ರನ್ಗಳ ಅಂತರದಿಂದ ಸೋಲಿಸಿದೆ. ಪಂದ್ಯ ಮುಗಿದ ಬಳಿಕ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.

Ad Widget . Ad Widget .

ಕಮ್ಮಿನ್ಸ್ ಮಾತನಾಡಿ, ಸಹ ಆಟಗಾರರಿಗೆ ಹಿತ ನುಡಿಯನ್ನು ನುಡಿದರು. ಇಂದು ನಮಗೆ ಒಳ್ಳೆಯ ರಾತ್ರಿ ಅಲ್ಲ. ದುರಾದೃಷ್ಟವಶಾತ್ ನಮ್ಮ ಇನ್ನಿಂಗ್ಸ್‌ನಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ. ನಾವು ಮೊದಲು ಬ್ಯಾಟ್ ಮಾಡಬೇಕಾಗಿತ್ತು. ಗೆಲ್ಲುವ ಮೊದಲು ನಾವು ನಮ್ಮ ಪರವಾಗಿ ಕೆಲಸ ಮಾಡಬೇಕು. ನಿನ್ನೆಯ ದಿನ ಗೆಲುವು ನಮ್ಮ ಪರವಾಗಿ ಇರಲಿಲ್ಲ ಎಂದು ಭಾವಿಸುತ್ತೇನೆ ಎಂದರು.

Ad Widget . Ad Widget .

ಗೆದ್ದಾಗ ನಾನು ಮಾತನಾಡುತ್ತೇನೆ, ಸೋತಾಗ ಕೋಚ್ ಡೇನಿಯಲ್ ವೆಟ್ಟೋರಿ ಮಾತನಾಡುತ್ತಾರೆ. ಆದರೆ ನಮ್ಮ ಹುಡುಗರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದು ಟಿ20 ಕ್ರಿಕೆಟ್! ನೀವು ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ. ಸೋಲಿನ ಬಗ್ಗೆ ಹೆಚ್ಚು ಗಮನ ಕೊಡಬೇಡಿ. ನಮ್ಮದು ಬಲಿಷ್ಠ ತಂಡ. ಬ್ಯಾಟಿಂಗ್ ಲೈನಪ್ ತುಂಬಾನೇ ಚೆನ್ನಾಗಿದೆ. ಆದರೂ ಇದು ಪ್ರತಿ ಪಂದ್ಯದಲ್ಲೂ ಕೆಲಸ ಮಾಡಲ್ಲ ಎಂದರು.

Leave a Comment

Your email address will not be published. Required fields are marked *