Ad Widget .

ಬೇಲೂರು: ಆಟೋ ಮೇಲೆ ಕಾಡಾನೆ ಹಿಂಡು ದಾಳಿ

ಸಮಗ್ರ ನ್ಯೂಸ್‌ : ಏ.25 ರಂದು ಬೆಳ್ಳಂಬೆಳಗ್ಗೆ ಕಾಡಾನೆಗಳ ಗುಂಪು ದಾಳಿ ಮಾಡಿದ ಪರಿಣಾಮ ಆಟೋ ಜಖಂ ಗೊಂಡು ಚಾಲಕ ಹಾಗೂ ಪ್ರಯಾಣಿಕ ಮಹಿಳೆ ಗಾಯಗೊಂಡ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಗುಜ್ಜನಹಳ್ಳಿ ತಿರುವಿನ ಮಿಷನ್ ಕಾಡಿನ ಬಳಿ ನಡೆದಿದೆ.

Ad Widget . Ad Widget .

ಆಟೋ ಚಾಲಕ ಮೋಹನ್ ಶಿವಾನಿ(೬೫) ಯವರನ್ನು ಆಟೋದಲ್ಲಿ ಕೂರಿಸಿಕೊಂಡು ಗುಜ್ಜನಹಳ್ಳಿ ಗ್ರಾಮದಿಂದ ಅರೇಹಳ್ಳಿಗೆ ಬರುವಂತಹ ಸಂದರ್ಭದಲ್ಲಿ ೫ ಕಾಡಾನೆಗಳು ಮಿಷನ್ ಕಾಡಿನ ತಿರುವಿನ ಬಳಿ ಅಡ್ಡಬಂದಿವೆ. ಈ ವೇಳೆ ೨ ಕಾಡಾನೆಗಳು ಚಲಿಸುತ್ತಿದ್ದ ಆಟೋ ಮೇಲೆ ದಾಳಿ ಮಾಡಲು ಮುಂದಾ ದಾಗ ಚಾಲಕ ಆಟೋ ಬಿಟ್ಟು ದೂರ ಹೋಗಿದ್ದಾರೆ.

Ad Widget . Ad Widget .

ಮಹಿಳೆ ಮಾತ್ರ ಆಟದಲ್ಲಿ ಕುಳಿತು ಅರಚಾಡಲು ಪ್ರಾರಂಭಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಾಡಾನೆಗಳು ಆಟೋವನ್ನು ರಸ್ತೆಯಿಂದ ತಳ್ಳಿಕೊಂಡು ಚರಂಡಿ ಬಳಿ ಬಿಟ್ಟ ಪರಿಣಾಮ ಆಟೋ ಮುಂಭಾಗ ಜಖಂ ಆಗಿದೆ.

ಚಾಲಕ ಆಟೋದಲ್ಲಿ ಕಿರುಚಾ ಡುತ್ತಿದ್ದ ಒಂಟಿ ಮಹಿಳೆಯನ್ನು ಪಾರುಮಾಡಲು ತಾವೂ ಕೂಡ ಜೋರಾಗಿ ಕಿರುಚಿದ್ದರಿಂದ ಆನೆ ಗಳು ಅಲ್ಲಿಂದ ತೆರಳಿವೆ. ಘಟನೆಯಲ್ಲಿ ಶಿವಾನಿಯವರಗೆ ಗಾಯಗಳಾಗಿವೆ. ಇಂತಹ ಪ್ರಕರಣಗಳು ನಿರಂ ತರವಾಗಿ ಸಂಭವಿಸುತ್ತಿರುವು ದರಿಂದ ಇಲಾಖೆ ವಿರುದ್ಧ ಸಾರ್ವ ಜನಿಕರು ಆಕ್ರೋಶ ಹೊರಹಾಕಿ ಬಡ ಆಟೋ ಚಾಲಕ ಮೋಹನ್ ರವರಿಗೆ ಇಲಾಖೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *