Ad Widget .

ಕುಮಾರಸ್ವಾಮಿಯವ್ರೇ… ಹಾಸನದ ಬೀದಿಗಳಲ್ಲಿ ಓಡಾಡುತ್ತಿರುವ ಪೆನ್ ಡ್ರೈವ್ ನಿಮ್ದೇನಾ? ಕಾಂಗ್ರೆಸ್ ತೀವ್ರ ವಾಗ್ದಾಳಿ

ಸಮಗ್ರ ನ್ಯೂಸ್: ಕುಮಾರಸ್ವಾಮಿಯವರೇ, ನೀವು ತೋರಿಸಿ, ತೋರಿಸಿ ಜೇಬೋಳಗೆ ಇಳಿಸಿಕೊಳ್ಳುತ್ತಿದ್ದ ಪೆನ್ ಡ್ರೈವ್‌ನಲ್ಲಿನ ರಹಸ್ಯ ಈಗ ಹೊರಬಂದಿದೆಯೇ? ಹಾಸನದ ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇನಾ? ಕುಮಾರಸ್ವಾಮಿಯವರೇ, ರಾಜ್ಯದ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ದಾರಿ ತಪ್ಪಿದ್ದಾರೆ ಎಂದಿದ್ದ ನೀವು ಯಾಕೆ ಈಗ ಗಾಢ ಮೌನ ವಹಿಸಿದ್ದೀರಿ? ದಾರಿ ತಪ್ಪಿ ನಡೆದವರು ಯಾರು ಎನ್ನುವ ಸಂಗತಿ ಬಟಾಬಯಲಾಗಿರುವಾಗ ರಾಜ್ಯದ ಜನರಿಗೆ ಮುಖ ತೋರಿಸಲಾಗುತ್ತಿಲ್ಲವೇ?? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.

Ad Widget . Ad Widget .

ಇಂದು ಎಕ್ಸ್ ಮಾಡಿರುವಂತ ಕಾಂಗ್ರೆಸ್, ಗೌರವದಿಂದ ಮಂಗಳಸೂತ್ರ ತೊಟ್ಟಿರುವ ಹೆಣ್ಣು ಮಕ್ಕಳ ಮಾನ ಮರ್ಯಾದೆ ಹರಾಜು ಮಾಡಿದ್ದು ಯಾರು ಎಂದು ಕಣ್ಬಿಟ್ಟು ನೋಡಿ ಮೋದಿಯವರೇ… ಹಾಸನ ಮೂಲದ ಬಿಜೆಪಿ ಬೆಂಬಲಿತ ಸಂಸದನಲ್ಲವೇ..? ಇದು ಮಹಿಳೆಯರ ಮಂಗಳ ಸೂತ್ರದ ಪಾವಿತ್ರ್ಯತೆಗೆ ಕುತ್ತು ತಂದಿದ್ದು ಎಂದು ನಿಮಗೆ ಅನಿಸುವುದಿಲ್ಲವೇ? ನಿಮಗೆ ಮಹಿಳೆಯರ ಘನತೆ, ಮಂಗಳಸೂತ್ರದ ಪಾವಿತ್ರ್ಯತೆಯ ಬಗ್ಗೆ ನೈಜ ಕಾಳಜಿ ಇದ್ದಿದ್ದೇ ಆದರೆ ನಿಮ್ಮ ಮೈತ್ರಿಕೂಟದ ಕರ್ಮಕಾಂಡದ ಬಗ್ಗೆ ಕ್ಷಮೆ ಕೇಳಿ ಎಂದು ಆಗ್ರಹಿಸಿದೆ.

Ad Widget . Ad Widget .

ಚುನಾವಣೆಗೂ ಮುನ್ನವೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಡಿವೋರ್ಸ್ ಹಂತಕ್ಕೆ ಬಂದಿರುವಂತಿದೆ. ಒತ್ತಾಯದ ಮದುವೆ, ಒಲ್ಲದ ಸಂಸಾರದ ಆಯಸ್ಸು ಕಡಿಮೆ ಎನ್ನುವ ಸಂಗತಿ ಎರಡೂ ಪಕ್ಷಗಳಿಗೆ ಅರ್ಥವಾದಂತಿದೆ! ಹಾಸನದಲ್ಲಿ ಬಿಜೆಪಿಯ ಪ್ರೀತಮ್ ಗೌಡ ಶತಾಯಗತಾಯ ಜೆಡಿಎಸ್ ಗೆಲ್ಲಬಾರದು ಎಂದು ತೊಡೆ ತಟ್ಟಿದ್ದಾರಂತೆ, ಮಂಡ್ಯದಲ್ಲಿ ಸುಮಲತಾ ದೂರದೂರವಂತೆ! ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಸೇರಿದ್ದಾರಂತೆ. ಜೆಡಿಎಸ್ ಪಕ್ಷಕ್ಕೆ ಬಿಜೆಪಿಯ ಅಪಾಯಕಾರಿ ಸಾಂಗತ್ಯದ ಅರಿವಾಗುವುದರ ಒಳಗಾಗಿ ಕಾಲ ಮಿಂಚಿದೆ, ನಂಬಿಸಿ ಕತ್ತು ಕೊಯ್ಯುವ ಬಿಜೆಪಿಯ ಸಖ್ಯ ಜೆಡಿಎಸ್ ಪಕ್ಷವನ್ನು ಮುಳುಗಿಸಲಿದೆ. ದೇವೇಗೌಡರ ಮಾತುಗಳೇ ಇದಕ್ಕೆ ಸಾಕ್ಷಿ ಹೇಳುತ್ತಿವೆ ಎಂದಿದೆ.

Leave a Comment

Your email address will not be published. Required fields are marked *