Ad Widget .

ಕಲಬುರಗಿ: ಒಂದು ಕಡೆ ಚುನಾವಣಾ ಗುಂಗು ಇನ್ನೊಂದು ಕಡೆ ಜೋಡೆತ್ತುಗಳ ಓಟದ ರಂಗು

ಸಮಗ್ರ ನ್ಯೂಸ್‌ : ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಾಣ ಗ್ರಾಮದಲ್ಲಿ ಶಾಸಕ ಎಮ್.ವೈ.ಪಾಟೀಲ ಅಭಿಮಾನಿಗಳಿದ ಜೋಡೆತ್ತುಗಳ ಓಟದ ಸ್ಪರ್ಧೆ ನಡೆಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಅಮರಗೌಡ ಪಾಟೀಲ ಪ್ರಸ್ತುತ ಆಧುನಿಕತೆಯ ಯುಗದಲ್ಲಿ ಹಳ್ಳಿ ಸೊಗಡಿನ ಎಲ್ಲಾ ಕ್ರೀಡೆಗಳು ಮರೆಮಾಚುತ್ತಿವೆ. ಹಂತಹದರಲ್ಲಿ ಉಡಚಾಣ ಗ್ರಾಮದ ವಿಶ್ವನಾಥ ಮಠಪತಿ ಅವರ ತಂಡ ರೈತರಿಗಾಗಿ ಜೋಡೆತ್ತುಗಳ ಓಟದ ಪಂದ್ಯದಲ್ಲಿ ನಡೆಸುತ್ತಿರುವುದು ಸಂತಸ ತಂದಿದೆ.

Ad Widget . Ad Widget . Ad Widget .

ಎಲ್ಲೊ ಒಂದುಕಡೆ ಗ್ರಾಮೀಣ ಕ್ರೀಡೆಗಳು ಮರೆಮಾಚುತ್ತಿವೆ ಎನ್ನುವ ಅಸಮಾಧಾನ ನನ್ನಲ್ಲಿತ್ತಾದರೂ ಇವತ್ತು ಉಡಚಾಣ ಗ್ರಾಮದಲ್ಲಿ ಇನ್ನೂ ಜೀವಂತ ಉಳಿದಿದೆ ಎಂದು ಅತೀವ ಸಂತೋಷವಾಗುತ್ತಿದೆ ಎಂದರು.ರೈತರು ತಮ್ಮ ಎತ್ತುಗಳು ಗೆಲ್ಲಲು ಅವುಗಳಿಗೆ ಪೆಟ್ಟು ಕೊಡದೆ ಎತ್ರುಗಳು ಗೆಲ್ಲಲು ಪ್ರೇರಣೆ ನೀಡಿ ಎಂದು ರೈತರಿಗೆ ಕಿವಿ ಮಾತು ತಿಳಿಸಿದರು.

ನಂತರ ಮಾತನಾಡಿದ ಮರುಳರಾಧ್ಯ ಶಿವಾಚಾರ್ಯರು ದೇಶದ ಬೆನ್ನೆಲುಬು ರೈತ ಆದರೆ ರೈತನಿಂದ ಬದುಕಿರುವ ಮನುಷ್ಯ ಕುಲ ರೈತರನ್ನ ಕಡೆಗಣಿಸುತ್ತಿದೆ.ಅವರ ಕಷ್ಟದ ಜೀವನಕ್ಕೆ ಯಾರು ದಾರಿ ದೀಪವಾಗದಿರುವುದು ದುಃಖಕರ ಸಂಗತಿಯಾಗಿದೆ. ತಾಲ್ಲೂಕಿನ ಉಪಚಾರ ಗ್ರಾಮದ ರೈತಪರ ಕಾಳಜಿಯುಳ್ಳ ಯುವಕರ ಬಳಗ ಜೋಡೆತ್ತುಗಳ ಓಟದ ಸ್ಪರ್ಧೆ ಮಾಡಿರುವುದು ಈ ಭಾಗದ ರೈತರ ಮುಖದಲ್ಲಿ ಸಂತಸ ತಂದಿದೆ. ಗ್ರಾಮೀಣ ಕ್ರೀಡೆಗಳಿಂದ ಜನರು ದೈಹಿಕವಾಗಿ ಸದೃಢರಾಗುವುದರಲ್ಲಿ ಎರಡು ಮಾತಿಲ್ಲ.ಎಲ್ಲರೂ ಗ್ರಾಮೀಣ ಕ್ರೀಡೆಗಳಿಗೆ ಬೆಂಬಲಿಸಬೇಕು ಎಂದರು.

ಇದೆ ಸಂದರ್ಭದಲ್ಲಿ ಎತ್ತುಗಳ ಓಟದ ಸ್ಪರ್ಧೆಯ ಮಾಲಿಕರಾದ ವಿಶ್ವನಾಥ ಮಠಪತಿ,ಪುಂಡಲೀಕ ನಲಬೆ,ಗುರುರಾಜ ಹಂಗರಗಿ,ಅನೀಲ ಕಾಮರೆಡ್ಡಿ,ನಿಂಗಪ್ಪ ಕಣ್ಣಿ,ಮುಖಂಡರಾದ ಚನ್ನಪ್ಪ ನಾವಿ, ರುದ್ರಯ್ಯ ಕಳ್ಳಿಮಠ, ಹಿರಗಪ್ಪ ಕನ್ನೊಳ್ಳಿ, ಅಶೋಕ ಪಾಟೀಲ, ಶಂಕರಲಿಂಗ, ಶಿವಲಿಂಗ, ಅಭಿಶೇಕ ಪಾಟೀಲ, ವಿಠ್ಠಲ ಕಡ್ಲಾಜಿ, ಅಕ್ಷಯ, ಸುನೀಲ, ಮುತ್ತುರಾಜ, ವಿಠ್ಠಲ ಬಂಕಲಗಿ, ಮೈಲಾರಿ, ಈರಣ್ಣಾ ಚಂದ್ರಕಾಂತ ಅರ್ಜುಣಗಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *