Ad Widget .

ಬಹಿರಂಗವಾಗಿ ಹೆಣ್ಣು ಮಕ್ಕಳನ್ನು ಅವಮಾನಿಸಿದ್ದಕ್ಕೆ ನಟಿ ಶ್ರುತಿಗೆ ಮಹಿಳಾ ಆಯೋಗದಿಂದ ನೋಟಿಸ್

ಸಮಗ್ರ ನ್ಯೂಸ್‌ : ಕಾಂಗ್ರೆಸ್ ಸರ್ಕಾರ ಅನೇಕ ಗ್ಯಾರಂಟಿ ಯೋಜನೆಯಿಂದ ಹಾಗೂ ಫ್ರೀ ಬಸ್ ಯೋಜನೆಯಿಂದ ತೀರ್ಥಯಾತ್ರೆಗೆಂದು ಹೋಗುತ್ತೇವೆ ಎಂದು ಹೇಳಿ ಹೆಣ್ಣು ಮಕ್ಕಳು ಎಲ್ಲೆಲ್ಲೂ ಹೋಗುತ್ತಿರುತ್ತಾರೆ ಎಂದು ನಟಿ ಶ್ರುತಿ ಮಾತನಾಡಿರೋದು ಮಾಧ್ಯಮದಲ್ಲಿ ವರದಿಯಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ರಾಜ್ಯ ಮಹಿಳಾ ಆಯೋಗ ನಟಿ ಶ್ರುತಿ ಯವರಿಗೆ ನೋಟಿಸ್ ಜಾರಿ ಮಾಡಿದೆ.

Ad Widget . Ad Widget .

ನಟಿ ಶ್ರುತಿಗೆ ಕೊಟ್ಟಿರುವ ನೋಟಿಸ್ ನಲ್ಲಿ ಈ ರೀತಿ ಬಹಿರಂಗವಾಗಿ ಹೆಣ್ಣು ಮಕ್ಕಳನ್ನು ಅವಮಾನಿಸಿರೋದು ಖಂಡನೀಯ. ರಾಜ್ಯ ಮಹಿಳಾ ಆಯೋಗದ ಅಧಿನಿಯಮ 1995 ಪರಿಚಯ 10(ಎ)ಮೇರೆಗೆ ನೋಟಿಸ್ ಜಾರಿ ಮಾಡಿದೆ. ಏಳು‌ ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ.

Ad Widget . Ad Widget .

ಉಡುಪಿ ಜಿಲ್ಲೆಯ ಬಂದೂರಿನಲ್ಲಿ ನಡೆದ ಚುನಾವಣಾ ಭಾಷಣದ ಅಬ್ಬರದಲ್ಲಿ ಮಹಿಳೆಯರನ್ನು ಶ್ರುತಿ ಟೀಕಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೆದಿತ್ತು. ಅವರು ಮಾಡಿದ ಭಾಷಣದ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗಿತ್ತು. ನಂತರ ಮಹಿಳಾ ಆಯೋಗ ನೋಟಿಸ್ ನೀಡಿ, ಸ್ಪಷ್ಟೀಕರಣ ಕೇಳಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *