Ad Widget .

ಮಂಗಳೂರು: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರ-ಮಾಸ್ಟರಿಂಗ್ ಕಾರ್ಯ ಆರಂಭ

ಸಮಗ್ರ ನ್ಯೂಸ್ : ದಕ್ಷಿಣಕನ್ನಡ ಜಿಲ್ಲೆಯ 8 ಕಡೆಗಳಲ್ಲಿ ಮಾಸ್ಟರಿಂಗ್ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ 18,18,127 ಮತದಾರರಿದ್ದಾರೆ. ಒಟ್ಟು 1876 ಮತಗಟ್ಟೆ ಇರಲಿದೆ. 171 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗು 1705 ಸಾಮಾನ್ಯ ಮತಗಟ್ಟೆ ಇರಲಿದ್ದು, ಮತಗಟ್ಟೆಗಳಿಗೆ 11255 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

Ad Widget . Ad Widget .

ಇನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 1500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 1600 ಪೊಲೀಸರ ನಿಯೋಜನೆ ಮಾಡಲಾಗಿದೆ. ಸದ್ಯ ಮತಗಟ್ಟೆಗಳಿಗೆ ತೆರಳಿರುವ ಸಿಬ್ಬಂದಿಗಳಿಗೆ ಅಧಿಕಾರಿಗಳು ನಿರ್ದೇಶನಗಳನ್ನ ನೀಡುತ್ತಿದ್ದಾರೆ. ಇನ್ನೇನು ಕೆಲವೇ ಹೊತ್ತುಗಳಲ್ಲಿ ಮತಪೆಟ್ಟಿಗೆ ಯೊಂದಿಗೆ ಮತಗಟ್ಟೆಗಳಿಗೆ ಅಧಿಕಾರಿಗಳು ತೆರಳಲಿದ್ದಾರೆ.

Ad Widget . Ad Widget .

ಮತದಾರರ ವಿವರ: ಒಟ್ಟು ಮತದಾರರ ಸಂಖ್ಯೆ- 18,18,127, ಪುರುಷರು- 8,87,122, ಮಹಿಳೆಯರು- 9,30,928. ತೃತೀಯ ಲಿಂಗಿಗಳು- 77

ಮತಗಟ್ಟೆ ವಿವರ: ಒಟ್ಟು ಮತಗಟ್ಟೆ- 1,876, ಅತಿ ಸೂಕ್ಷ್ಮ ಮತಗಟ್ಟೆ- 171. ಸಾಮಾನ್ಯ ಮತಗಟ್ಟೆ- 1705

ಭದ್ರತೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ವಿವರ:
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ- ಒಟ್ಟು 1,500 ಪೊಲೀಸ್ ಅಧಿಕಾರಿ ಸಿಬ್ಬಂದಿ ನಿಯೋಜನೆ. 46 ಪಿ.ಎಸ್.ಐ‌ ಸೆಕ್ಟರ್ ಮೊಬೈಲ್, 14 ಪಿ.ಐ ಸೂಪರ್ ವಿಷನ್ ಸೆಕ್ಟರ್ ಅಧಿಕಾರಿ, 4 ಎ.ಸಿ.ಪಿ ನೋಡಲ್ ಅಧಿಕಾರಿ ನೇಮಕ,

1003 ಪೊಲೀಸ್ ಸಿಬ್ಬಂದಿ, 350 ಗೃಹ ರಕ್ಷಕ ಸಿಬ್ಬಂದಿ, 17 ಫಾರೆಸ್ಟ್ ಗಾರ್ಡ್, 36 ಅತಿಸೂಕ್ಷ್ಮ ಮತಗಟ್ಟೆಗೆ ಕೇಂದ್ರೀಯ ಭದ್ರತಾ ಪಡೆ, 16 ASI ನಿಯೋಜನೆ, C.A.P.F- 2, KSRP- 1.

ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 1,600 ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ನಿಯೋಜನೆ: CAPF- 3, KSRP- 9, ಮತಗಟ್ಟೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ- 11,255 ಎಂದು ಎ.ಡಿ.ಸಿ ಡಾ. ಜಿ ಸಂತೋಷ್ ಕುಮಾರ್ ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *