ಸಮಗ್ರ ನ್ಯೂಸ್ : ನೇಹಾ ಹತ್ಯೆಯನ್ನ ಈಗಾಗಲೇ ಖಂಡಿಸಿದ್ದೇನೆ, ಈಗಲೂ ಖಂಡಿಸುತ್ತೇನೆ ಎಂದು ನಗರದಲ್ಲಿಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.
ಪ್ರಕರಣದ ತನಿಖೆಯನ್ನ ಸಿಐಡಿಗೆ ಕೊಟ್ಟಿದ್ದೇವೆ, ವಿಶೇಷ ನ್ಯಾಯಲಯ ಮಾಡಬೇಕು ಅಂತ ಹೇಳಿದ್ದೇನೆ. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು, ಘೋರ ಶಿಕ್ಷ ಕೊಡಲು ಪ್ರಯತ್ನ ಮಾಡಬೇಕೆಂದು ಮಾತಾಡಿದ್ದೇನೆ. ಅವರ ತಂದೆ ಜೊತೆಗೂ ಮಾತಾಡಿ, ಆರೋಪಿಗೆ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದೆವೆಂದು ಹೇಳಿದ್ದೇನೆ. ಬಿಜೆಪಿಯವರು ಒಂದಾದರೂ ಪ್ರಕರಣ ಸಿಬಿಐಗೆ ಕೊಟ್ಟಿದ್ದಾರಾ..?
ನೇಹಾ ಪ್ರಕರಣವನ್ನ ಸಿಐಡಿ ತನಿಖೆ ನಡೆಸುತ್ತಿದೆ, ಬಿಜೆಪಿಯವರಿಗೆ ಯಾವುದೇ ನೈತಿಕೆ ಹಕ್ಕು ಇಲ್ಲಾ ಮಾತಾಡೋದಕ್ಕೆ. ನೇಹಾ ಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡಬಾರದು ಎಂದು ಬಿಜೆಪಿ ವಿರುದ್ದ ಸಿಎಂ ಕಿಡಿಕಾರಿದ್ದಾರೆ.
ನೇಹಾ ಕೊಲೆಯಿಂದ ದೊಡ್ಡ ಅನ್ಯಾಯ ಆಗಿದೆ ನಾನು ಈಗಾಗಲೇ ಖಂಡಿಸಿದ್ದೇನೆ. ನೇಹಾ ಕೊಲೆಯನ್ನ ಸರ್ಕಾರ ತೀವ್ರವಾಗಿ ಖಂಡಿಸುತ್ತೆ. ತಪ್ಪಿತಸ್ಥರಿಗೆ ಘೋರವಾದ ಶಿಕ್ಷೆ ಕೊಡಲು ಪ್ರಾಮಾಣಿಕ ಪ್ರಯತ್ನ ಸರ್ಕಾರ ಮಾಡಲಿದೆ ಎಂದು ಬೀದರ್ ನಲ್ಲಿ ಹೇಳಿಕೆ ನೀಡಿದರು.