Ad Widget .

ಬಂಟ್ವಾಳ: ಬಸ್‌ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಂಧನ

ಸಮಗ್ರ ನ್ಯೂಸ್‌ : ಸ್ಲೀಪರ್ ಕೋಚ್ ಬಸ್‌ನಲ್ಲಿ ಬೆಂಗಳೂರಿನಿಂದ ಬಂಟ್ವಾಳಕ್ಕೆ ಪ್ರಯಾಣಿಸುತ್ತಿದ್ದ ಬಂಟ್ವಾಳ ಮೂಲದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಬೆಳ್ತಂಗಡಿ ಮೂಲದ ಮಹಮ್ಮದ್ ಅಝೀಮ್ ಬಂಧಿತ ಆರೋಪಿಯಾಗಿದ್ದಾನೆ. ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಸಹಪ್ರಯಾಣಿಕನಾಗಿದ್ದ ಆರೋಪಿ ಅಝೀಮ್ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದನು.

Ad Widget . Ad Widget .

ಬಸ್‌ ಸಕಲೇಶಪುರ ಕಳೆದು ಮುಂದಕ್ಕೆ ಸಾಗುತ್ತಿದ್ದಂತೆಯೇ ಮಲಗಿದ್ದ ವಿದ್ಯಾರ್ಥಿನಿಯ ಮೈಮೇಲೆ ಸಹಪ್ರಯಾಣಿಕ ಕೈ ಮಾಡಿರುವುದು ಕಂಡು ಬಂತು. ಕೃತ್ಯವನ್ನು ಬಸ್ಸಿನ ಚಾಲಕನ ಗಮನಕ್ಕೆ ತಂದರು. ಆದರೆ ಚಾಲಕನಿಂದ ಯಾವುದೇ ಸ್ಪಂದನೆ ದೊರೆಯದಿದ್ದಾಗ, ಬಸ್ಸಿನಲ್ಲಿದ್ದ ಕೆಲವು ಸಹ ಪ್ರಯಾಣಿಕರು ನೆರವಿಗೆ ಧಾವಿಸಿ ಆತನನ್ನು ವಿಚಾರಿಸಿದಾಗ ಬೆಳ್ತಂಗಡಿಯ ಲಾಯಿಲ ಗ್ರಾಮದ ಮಹಮ್ಮದ್ ಅಝೀಮ್ ಎಂದು ತಿಳಿಸಿದ್ದನು.

ಮುಂದಕ್ಕೆ ದಾರಿ ಮಧ್ಯೆ ಸಿಗುವ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ಎಂದು ಆಕೆ ಹೇಳಿದ ಬಳಿಕ ಆರೋಪಿ ಬಸ್ಸಿನ ಕಿಟಕಿಯಿಂದ ಹೊರಗೆ ಹಾರಿ ಪರಾರಿಯಾಗಿದ್ದನು. ಪ್ರಕರಣವನ್ನು ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಲಭ್ಯ ಮಾಹಿತಿಗಳನ್ನಾಧರಿಸಿ ಆರೋಪಿ ಮಹಮ್ಮದ್ ಅಝೀಮ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ವಿದ್ಯಾರ್ಥಿನಿ ಮನೆಗೆ ಬುಧವಾರ ಆರ್‌ ಎಸ್‌ ಎಸ್ ಮುಖಂಡ ಡಾ. ಕಲ್ಲಡ್ಲ ಪ್ರಭಾಕರ್ ಭಟ್ ಭೇಟಿ ನೀಡಿ ಧೈರ್ಯ ತುಂಬಿ, ಯುವತಿಯ ಧೈರ್ಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ವೇಳೆ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

Leave a Comment

Your email address will not be published. Required fields are marked *