Ad Widget .

ಜೈಪುರ : ಭಾರತೀಯ ವಾಯಪಡೆಯ ಕಣ್ಗಾವಲು ವಿಮಾನ ಪತನ

ಸಮಗ್ರ ನ್ಯೂಸ್‌ : ಭಾರತೀಯ ವಾಯಪಡೆಯ ಕಣ್ಗಾವಲು ವಿಮಾನವೊಂದು ರಾಜಸ್ಥಾನದ ಜೈಸಲ್ಮೇರ್‌ನಿಂದ ಸುಮಾರು 25 ಕಿಲೋಮೀಟರ್‌ ದೂರದಲ್ಲಿರುವ ಪಿಥಾಲ ಗ್ರಾಮದ ಬಳಿಯ ಜಮೀನಿನಲ್ಲಿ ಇಂದು ಬೆಳಗ್ಗೆ ಪತನಗೊಂಡಿದೆ.

Ad Widget . Ad Widget .

ಇದು ಮಾನವರಹಿತ ವಿಮಾನವಾದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಮಾನವು ಜಮೀನಿನಲ್ಲಿ ಪತನಗೊಂಡ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ. ಆದರೆ, ಇಡೀ ವಿಮಾನವು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.

Ad Widget . Ad Widget .

ಈ ಬಗ್ಗೆ ವಾಯುಪಡೆಯೇ ಮಾಹಿತಿ ನೀಡಿದೆ. ವಿಮಾನ ಪತನದ ಸುದ್ದಿ ತಿಳಿಯುತ್ತಲೇ ಖುರಿ ಪೊಲೀಸ್‌ ಠಾಣೆ ಅಧಿಕಾರಿ ಮೇ ಜಾಬ್ತಾ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಾಯುಪಡೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ.

Leave a Comment

Your email address will not be published. Required fields are marked *