Ad Widget .

ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡ ರಾಮಚಂದ್ರ ಅವರ ನಿವಾಸದ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ

ಸಮಗ್ರ ನ್ಯೂಸ್: ಬೆಂಗಳೂರಿನ ಆರ್.ಆರ್ ನಗರದಲ್ಲಿರುವ ನಟಿ ಅಮೂಲ್ಯ ಅವರ ಮಾವ, ಮಾಜಿ ಕಾರ್ಪೊರೇಟರ್‌ ಹಾಗೂ ಬಿಜೆಪಿ ಮುಖಂಡ ಆಗಿರುವ ರಾಮಚಂದ್ರ ಅವರ ಮನೆ ಮೇಲೆ ಚುನಾವಣಾ ಅಧಿಕಾರಿಗಳು ನಿನ್ನೆ ತಡರಾತ್ರಿ 10ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ.

Ad Widget . Ad Widget .

ಚುನಾವಣಾ ಅಧಿಕಾರಿಗಳು, ಅಬಕಾರಿ ಪೊಲೀಸ್, ವಾಣಿಜ್ಯ ತೆರಿಗೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ.10 ವಾಹನಗಳಲ್ಲಿ ಬಂದ 30ಕ್ಕೂ ಹೆಚ್ಚು ಅಧಿಕಾರಿಗಳಿಂದ ಪರಿಶೀಲನೆ ನಡೆಯಿತು. ಸದ್ಯ ರಾಮಚಂದ್ರ ಅವರು, ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಮನೆಯಲ್ಲೇ ಇದ್ದಾರೆ. ನಿರಂತರ ಪರಿಶೀಲನೆಯ ನಂತರ ಮನೆ ಕೆಲಸದವರನ್ನು ಒಬ್ಬೊಬ್ಬರನ್ನಾಗಿ ಮನೆ ಒಳಗಿನಿಂದ ಹೊರ ಬಿಡಲಾಯಿತು. ಸತತ 4 ಗಂಟೆಗಳ ಕಾಲ‌ ಶೋಧ‌ ಕಾರ್ಯ ನಡೆಸಿ ಕೆಲವು ದಾಖಲೆಗಳನ್ನು ಪಡೆದು ಅಧಿಕಾರಿಗಳು ತೆರಳಿದ್ದಾರೆ.

Ad Widget . Ad Widget .

ದಾಳಿ ವೇಳೆ ಯಾವುದೇ ಅಕ್ರಮ ಹಣವಾಗಲಿ, ಅಕ್ರಮ ಲಿಕ್ಕರ್ ಆಗಲಿ, ಅಕ್ರಮ ಚಿನ್ನಾಭರಣವಾಗಲೀ ಪತ್ತೆಯಾಗಿಲ್ಲ. ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮನೆ ಬಳಿ ಜಮಾಯಿಸಿದ್ದರು. ದಾಳಿ‌ ಮುಗಿಸಿ ಹೊರಟ ಅಧಿಕಾರಿಗಳಿಗೆ “ಚೊಂಬು ಸಿಗ್ತಾ, ಚೊಂಬು- ಡಿಕೆ ಚೊಂಬು” ಎಂದು ಬಿಜೆಪಿ ಕಾರ್ಯಕರ್ತರು ವ್ಯಂಗ್ಯ ಮಾಡಿದರು. ಮನೆ ಮುಂದೆ ಜಮಾಯಿಸಿದ್ದ ಕಾರ್ಯಕರ್ತರು ಕಾಂಗ್ರೆಸ್‌ಗೆ ಧಿಕ್ಕಾರ ಕೂಗಿ‌ ಅಕ್ರೋಶ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *