Ad Widget .

ಬೀದರ್: ಮೀಸಲು ಅರಣ್ಯ ಪ್ರದೇಶದ ಜಮೀನು ಸೈಟ್ ಮಾಡಿ ಮಾರಾಟ| ಒತ್ತುವರಿದಾರರಿಗೆ ಶಾಕ್ ಕೊಟ್ಟ ಅರಣ್ಯ ಇಲಾಖೆ

ಸಮಗ್ರ ನ್ಯೂಸ್‌ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ ಬಿಟ್ಟರೆ ಅತೀ ಹೆಚ್ಚು ಅರಣ್ಯ ಪ್ರದೇಶ ಬೀದರ್ ಜಿಲ್ಲೆಯಲ್ಲಿದೆ. ಜೊತೆಗೆ ಅತಿ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಕೂಡ ಆಗಿದೆ.

Ad Widget . Ad Widget .

ಈಗ ಕಳೆದ ಒಂದೂವರೆ ವರ್ಷದ ಹಿಂದೆ ಬೀದರ್ ಜಿಲ್ಲೆಗೆ ಡಿಎಫ್ಓ ಆಗಿ ವಾನಂತಿ ಎಂ.ಎಂ ಅವರು ಬಂದಾಗಿನಿಂದ ಅರಣ್ಯ ಜಮೀನನ್ನ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿದ್ದು,

Ad Widget . Ad Widget .

ಕಳೆದ ಒಂದೂವರೆ ವರ್ಷದಲ್ಲಿ ಒಂದು ಸಾವಿರದ ಎರಡು ನೂರಾ ಹದಿಮೂರು ಎಕರೆಯಷ್ಟು ಒತ್ತೂವರಿಯಾಗಿದ್ದ ಜಮೀನನ್ನ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆಯುವುದರ ಮೂಲಕ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಉಳುಮೆ ಹಾಗೂ ಕೃಷಿಯೇತರ ಕೆಲಸ ಕಾರ್ಯದಲ್ಲಿ ತೊಡಗಿದ್ದವರಿಗೆ ಶಾಕ್ ಮುಟ್ಟಿಸಿದ್ದಾರೆ.

ಬೀದರ್ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಅರಣ್ಯ ಭೂಮಿಯನ್ನ ಒತ್ತುವರಿ ಮಾಡಿಕೊಂಡು ಹತ್ತಾರು ವರ್ಷದಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದರು. ಅರಣ್ಯ ಇಲಾಖೆಗೆ ಸೇರಿದ ಜಮೀನು ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಅಧಿಕಾರಿಗಳು ಕಂಡು ಕಾಣದಂತೆ ಕುಳಿತಿದ್ದರು.

ಆದರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನಂತಿ ಎಂ.ಎಂ ಅವರು ಒತ್ತುವರಿದಾರರಿಂದ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನ ವಶಕ್ಕೆ ಪಡೆದುಕೊಂಡು ಆ ಜಮೀನಿನಲ್ಲಿ ಸಸಿಗಳನ್ನ ನಾಟಿ ಮಾಡುವುದರ ಮೂಲಕ ಹಸಿರೀಕರಣಕ್ಕೆ ಮುಂದಾಗಿದ್ದಾರೆ.

ಇನ್ನು ಅರಣಾಧಿಕಾರಿ ವಾನಂತಿ ಅವರು ಮಾಡಿದ ದೊಡ್ಡ ಕಾರ್ಯಾಚರಣೆ ಅಂದರೆ ಬೀದರ್ ನಗರಕ್ಕೆ ಹೊಂದಿಕೊಂಡಿರುವ ಶಹಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶದ ಜಮೀನು ಒತ್ತುವರಿ ತೆರವು ಮಾಡಿದ್ದು. ಈ ಅರಣ್ಯ ಭೂಮಿಯೂ ಬೀದರ್ ನಗರಕ್ಕೆ ಹೊಂದಿಕೊಂಡಿದ್ದು ಈ ಜಮೀನಿಗೆ ಇಲ್ಲಿ ಒಂದು ಎಕರೆಗೆ ಕನಿಷ್ಟವೇಂದರೂ ಎರಡರಿಂದ ಮೂರು ಕೋಟಿ ರೂಪಾಯಿ ಬೆಲೆ ಇದೆ.

ಇದನ್ನೆ ಬಂಡಾವಾಳ ಮಾಡಿಕೊಂಡಿದ್ದ ಭೂಮಿ ಕಬಳಿಕೆದಾರರು ಅರಣ್ಯ ಪ್ರದೇಶದ ಜಮೀನನ್ನೇ ಒತ್ತುವರಿ ಮಾಡಿಕೊಂಡು ಅಲ್ಲಿ ಸೈಟ್ ನಿರ್ಮಿಸಿ ಒಂದು ಸೈಟ್ ಗೆ 20 ರಿಂದಾ 25 ಲಕ್ಷದವರೆಗೆ ಮಾರಾಟ ಮಾಡಿದ್ದಾರೆ.

Leave a Comment

Your email address will not be published. Required fields are marked *