Ad Widget .

ಬೀದರ್: ಲಗ್ನ ಪತ್ರಿಕೆಯಲ್ಲಿ ಶರಣರ ವಚನ| ಜಿಲ್ಲೆಯಲ್ಲಿ ಪತ್ರಿಕೆಯದ್ದೇ ಫುಲ್ ಹವಾ..!

ಸಮಗ್ರ ನ್ಯೂಸ್‌ : ಇತ್ತೀಚೆಗೆ ಲಗ್ನಪತ್ರಿಕೆಯಲ್ಲಿ ಮತದಾನ ಮಾಡಿ ಎಂದು ಮುದ್ರಿಸಿ ಜಾಗೃತಿ ಮೂಡಿಸಲಾಗಿತ್ತು, ಆದ್ರೆ ಇಲ್ಲೊಂದು ಕುಟುಂಬ ತಮ್ಮ ಲಗ್ನ ಪತ್ರಿಕೆಯಲ್ಲಿ ಸಾಂಸ್ಕೃತಿಕ ನಾಯಕ ಬಸವಾದಿ ಶರಣರ ವಚನಗಳ ಸಂದೇಶ ನೀಡುವ ಮೂಲಕ ಹೊಸ ಪ್ರಯೋಗ ಮಾಡಿದ್ದಾರೆ.

Ad Widget . Ad Widget .

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೆಳಕುಣಿ ಗ್ರಾಮದ ಜುಮ್ಮಾ-ವಲ್ಲೇಪೂರೆ ಪರಿವಾರದಿಂದ ಈ ವಿನೂತನ ಪ್ರಯೋಗ ಮಾಡಿದ್ದು, ಸುಖಿ ಜೀವನದ 3 ಸೂತ್ರ ಸೇರಿ 31 ಸಂದೇಶವನ್ನು ಮದುವೆ ಪತ್ರಿಕೆ ಒಳಗೊಂಡಿದೆ.

Ad Widget . Ad Widget .

ಸದ್ಯ ಜಿಲ್ಲೆಯಲ್ಲಿ ವಿನೂತನ ಮದುವೆ ಆಹ್ವಾನ ಪತ್ರಿಕೆಯದ್ದೇ ಫುಲ್ ಹವಾ, ವಿಶೇಷ ಏನಪ್ಪಾ ಅಂದ್ರೆ ವರ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ, ವಧು ಎಂಜಿನಿಯರಿಂಗ್ ವ್ಯಾಸಂಗದಲ್ಲಿದ್ದಾರೆ. ಇವರ ಇಷ್ಟೆಲ್ಲಾ ಓದಿ ವಿದೇಶದಲ್ಲಿ ಉತ್ತಮ ಕೆಲಸದಲ್ಲಿ ಇದ್ರು ಕೂಡ ನಮ್ಮ ಸಂಸ್ಕೃತಿ ಬಿಡಲಿಲ್ಲ ಎಂದು ಜನರು ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಅಲ್ಲದೇ ಇವರ ಪೂರ್ವಜರಿಂದಲೂ ಬಸವಣ್ಣನ ವಚನಗಳನ್ನೇ ಆದರ್ಶವಾಗಿ ಇಟ್ಟುಕೊಂಡು ಜೀವನ ಸಾಗಿಸುತ್ತಾ ಬಂದಿದ್ದಾರೆ. ಜೊತೆಗೆ ಇವರ ಮನೆಯ ಪ್ರತಿ ಗೋಡೆಗಳಲ್ಲಿ ಬಸವಣ್ಣನವರ ಫೋಟೋವನ್ನು ಹಾಕಲಾಗಿದೆ.

Leave a Comment

Your email address will not be published. Required fields are marked *