Ad Widget .

ಉಪ್ಪಿನಂಗಡಿ: ಬಸ್ ನಲ್ಲಿ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ| ದೂರು ದಾಖಲಿಸಿದ ಯುವತಿ

ಸಮಗ್ರ ನ್ಯೂಸ್: ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ಆಗಮಿಸುತ್ತಿದ್ದ ಹಿಂದೂ ಯುವತಿಗೆ ಮುಸ್ಲಿಂ ಯುವಕನೋರ್ವ ಕಿರುಕುಳ ನೀಡಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

Ad Widget . Ad Widget .

ಮತದಾನಕ್ಕೆಂದು ಬೆಂಗಳೂರಿನಿಂದ ಮಂಗಳೂರಿನತ್ತ ಖಾಸಗಿ ಬಸ್ ನಲ್ಲಿ ಬರುತ್ತಿದ್ದ ಯುವತಿಗೆ ಯುವಕ ಸಹಪ್ರಯಾಣಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

Ad Widget . Ad Widget .

ಯುವತಿ ರಕ್ಷಣೆಗಾಗಿ ಬಸ್ ಚಾಲಕನ ಮೊರೆ ಹೋದ ವೇಳೆ ಯಾವುದೇ ಸ್ಪಂದನೆ ದೊರೆಯದಿದ್ದು, ಬಳಿಕ ಯುವತಿ ಯುವಕನ ಮೇಲೆ ಪ್ರತಿರೋಧಯೊಡ್ಡಿ ಆತನಿಂದ ಆಧಾರ್ ಕಾರ್ಡ್ ಕಿತ್ತುಕೊಂಡಿದ್ದು, ಯುವಕ ಬಸ್ ನಿಧಾನವಾಗುತ್ತಿದ್ದಂತೆ ಬಸ್ ಕಿಟಕಿಯಿಂದ ಹೊರ ಜಿಗಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಆಧಾರ್ ಕಾರ್ಡ್ ನಲ್ಲಿ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಆದರ್ಶ ನಗರ ನಿವಾಸಿ ಇಬ್ರಾಹಿಂ ಎಂಬವರ ಮಹಮ್ಮದ್ ಅಜೀಂ ಎಂಬ ಮಾಹಿತಿ ಇದ್ದು, ಈ ಬಗ್ಗೆ ಯುವತಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *