Ad Widget .

ಹಲ್ಲೆ ಪ್ರಕರಣ: ನ್ಯಾಯ ಕೋರಿ ಪ್ರಲ್ಹಾದ ಜೋಶಿ ಭೇಟಿಯಾದ ಹರ್ಷಿಕಾ ಪೂಣಚ್ಚ ದಂಪತಿ

ಸಮಗ್ರ ನ್ಯೂಸ್: ಮೊನ್ನೆ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ತಮ್ಮ ಪಾರ್ಕಿಂಗ್ ವಿಚಾರವಾಗಿ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹುಬ್ಬಳ್ಳಿಯಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರನ್ನು ದಂಪತಿಗಳು ಭೇಟಿ ಮಾಡಿದ್ದಾರೆ.

Ad Widget . Ad Widget .

ʻಬೆಂಗಳೂರಿನ ಫ್ರೆಜರ್ ಟೌನ್‌ನಲ್ಲಿ ನಡೆದ ದೌರ್ಜನ್ಯ ಘಟನೆ ಬಳಿಕ ನಟಿ ಹರ್ಷಿಕಾ ಪೂರ್ಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ಬುಧವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿದರು. ಸೂಕ್ತ ಕ್ರಮಕ್ಕೆ ಮನವಿ ಮಾಡಿದರು. ನಿಮ್ಮ ಜೊತೆ ನಾವಿದ್ದೇವೆ ಎಂದು ಪ್ರಲ್ಹಾದ ಜೋಶಿ ಧೈರ್ಯದ ಮಾತು ಹೇಳಿದ್ದಾರೆ.

Ad Widget . Ad Widget .

ʻನಮ್ಮ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿದ ಮೂವರನ್ನು ಗುರುತಿಸಿದ್ದೇವೆ.‌ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಕೆಲ ವ್ಯಕ್ತಿಗಳನ್ನು ತೋರಿಸಿದ್ದು, ಗಲಾಟೆ ಮಾಡಿದವರ ಮುಖಚರ್ಯೆ ಇರುವ ವ್ಯಕ್ತಿಗಳನ್ನು ಗುರುತಿಸಿದ್ದೇವೆʼʼ ಎಂದು ಸಚಿವರೆದುರು ಹೇಳಿದರು. ʻʻನಮಗೆ ಆದಂತೆ ಬೇರೆ ಯಾರಿಗೂ ಈ ಘಟನೆ ಸಂಭವಿಸಿಬಾರದು. ಹೀಗಾಗಿ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದ್ದಾರೆʼʼ ಎಂದು ಹರ್ಷಿಕಾ ಪೂಣಚ್ಚ ಮಾಧ್ಯಮಗಳಿಗೆ ತಿಳಿಸಿದರು.

Leave a Comment

Your email address will not be published. Required fields are marked *