Ad Widget .

ಕೋಮುಗಲಭೆ ನಡೆದ ಪ್ರದೇಶಗಳಲ್ಲಿ ಮತದಾನವಿಲ್ಲ/ ಕಲ್ಕತ್ತಾ ಹೈಕೋರ್ಟ್ ಎಚ್ಚರಿಕೆ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಆಚರಣೆ ವೇಳೆ ಕೋಮುಗಲಭೆ ನಡೆದ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ. ಮುರ್ಷಿದಾಬಾದ್‍ನಲ್ಲಿ ಏಪ್ರಿಲ್ 17 ರಂದು ರಾಮನವಮಿ ಮೆರವಣಿಗೆ ಸಂದರ್ಭ ಹಿಂಸಾಚಾರದ ನಡೆದಿತ್ತು.

Ad Widget . Ad Widget .

ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ನೇತೃತ್ವದ ಪೀಠವು, ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಲು ಸಾಧ್ಯವಾಗದಿದ್ದರೆ, ಈ ಜಿಲ್ಲೆಗಳಲ್ಲಿ ಚುನಾವಣಾ ಆಯೋಗವು ಸಂಸತ್ತಿನ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ನಾವು ಹೇಳುತ್ತೇವೆ. ಮುಂದೆ ಇರೋದು ಅದೊಂದೇ ದಾರಿ. ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದರೂ, ಎರಡು ಗುಂಪಿನ ಜನರು ಈ ರೀತಿ ಜಗಳವಾಡುತ್ತಿದ್ದರೆ, ಅವರು ಯಾವುದೇ ಚುನಾಯಿತ ಪ್ರತಿನಿಧಿಗಳಿಗೆ ಅರ್ಹರಲ್ಲ. ರಾಮನವಮಿಯಂದು ಕೋಲ್ಕತ್ತಾದಲ್ಲಿ ಇದೇ ರೀತಿಯ ಮೆರವಣಿಗೆಗಳು ನಡೆದಿವೆ, ಆದರೆ ಅಲ್ಲಿ ಯಾವುದೇ ಹಿಂಸಾಚಾರ ವರದಿಯಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

Ad Widget . Ad Widget .

ಕೋಲ್ಕತ್ತಾದಲ್ಲಿಯೂ 23 ಕಡೆಗಳಲ್ಲಿ ಸಂಭ್ರಮಾಚರಣೆ ನಡೆದಿದೆ ಆದರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಂಸಿಸಿ ಇರುವಾಗ ರಾಜ್ಯ ಪೆÇಲೀಸರು ಏನು ಮಾಡ್ತಿದ್ದಾರೆ? ಕೇಂದ್ರ ಪಡೆಗಳು ಏನು ಮಾಡುತ್ತಿವೆ? ಎರಡೂ ಘರ್ಷಣೆಗಳನ್ನು ತಡೆಯಲು ಅವರಿಗೆ ಏಕೆ ಸಾಧ್ಯವಾಗಲಿಲ್ಲ ಪೀಠ ಪ್ರಶ್ನೆ ಮಾಡಿದ್ದು, ಆ ವೇಳೆ ಹಿಂಸಾಚಾರ ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಷ್ಟು ಜನರನ್ನು ಬಂಧಿಸಲಾಗಿದೆ ಎಂದು ಪೀಠವು ರಾಜ್ಯದ ವಕೀಲರನ್ನು ಪ್ರಶ್ನೆ ಮಾಡಿದೆ. ಇದೀಗ ಪ್ರಕರಣದ ತನಿಖೆಯನ್ನು ಸಿಐಡಿ ವಹಿಸಿಕೊಂಡಿದೆ ಎಂದು ರಾಜ್ಯದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಯಾವುದೇ ಸ್ಥಾನದ ಚುನಾವಣೆಯನ್ನು ಮುಂದೂಡುವ ಕುರಿತು ಹೈಕೋರ್ಟ್ ಯಾವುದೇ ಆದೇಶವನ್ನು ನೀಡದಿದ್ದರೂ, ಮುರ್ಷಿದಾಬಾದ್ ವ್ಯಾಪ್ತಿಯಲ್ಲಿ ಬರುವ ಬಹಾರ್ಂಪೆÇೀರ್‍ನಲ್ಲಿ ಚುನಾವಣೆಯನ್ನು ಮುಂದೂಡಬೇಕೆಂದು ಚುನಾವಣಾ ಆಯೋಗಕ್ಕೆ ಪ್ರಸ್ತಾಪಿಸುವುದಾಗಿ ಹೇಳಿದೆ.ಕೋಮು ಘರ್ಷಣೆಯ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಪೆÇಲೀಸರಿಗೆ ಹೈಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆ ಶುಕ್ರವಾರ, ಏಪ್ರಿಲ್ 26 ರಂದು ನಡೆಯಲಿದೆ.

Leave a Comment

Your email address will not be published. Required fields are marked *