Ad Widget .

ಎರಡು ಹೆಲಿಕಾಪ್ಟರ್‌ಗಳ ನಡುವೆ ಡಿಕ್ಕಿ| 10 ಮಂದಿ ಸಾವು

ಸಮಗ್ರ ನ್ಯೂಸ್: ಎ. 23ರಂದು ಮಲೇಷ್ಯಾ ಸಶಸ್ತ್ರ ಪಡೆಗಳ ಎರಡು ಹೆಲಿಕಾಪ್ಟರ್‌ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದು ಹತ್ತು ಮಂದಿ ಸಾವನ್ನಪ್ಪಿದ್ದ ಭೀಕರ ಘಟನೆ ನಡೆದಿದೆ. ಇದು ಲುಮುಟ್‌ನಲ್ಲಿರುವ ರಾಯಲ್ ಮಲೇಷಿಯನ್ ನೇವಿ ನೆಲೆಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಸೋಶೀಯಲ್‌ ಮೀಡಿಯಾದಲ್ಲಿ ಈ ವೀಡಿಯೊ ವೈರಲ್ ಆಗಿದೆ.

Ad Widget . Ad Widget .

ಮಿಲಿಟರಿ ಹೆಲಿಕಾಪ್ಟರ್‌ಗಳ ವಾಯು ಹಾರಾಟದ ಕುಶಲತೆಯನ್ನು ಪ್ರದರ್ಶಿಸುತ್ತಿರುವಾಗ ಅವುಗಳಲ್ಲಿ ಎರಡು ಡಿಕ್ಕಿ ಹೊಡೆದುಕೊಂಡವು. ಎರಡು ಹೆಲಿಕಾಪ್ಟರ್‌ಗಳಲ್ಲಿದ್ದವರಲ್ಲಿ ಯಾರೂ ಅಪಘಾತದಲ್ಲಿ ಬದುಕುಳಿಯಲಿಲ್ಲ. ಎರಡೂ ಹೆಲಿಕಾಪ್ಟರ್‌ಗಳಲ್ಲಿದ್ದ ಚಾಲಕರು ತರಬೇತಿ ಪಡೆಯುತ್ತಿದ್ದವರಾಗಿದ್ದರು. ಕೆಲವು ತರಬೇತಿ ವಿದ್ಯಾರ್ಥಿಗಳು ಹಾಗೂ ತರಬೇತಿದಾರರು ಇವುಗಳಲ್ಲಿದ್ದರು. ಸ್ಥಳೀಯ ವರದಿಗಳ ಪ್ರಕಾರ, M503-3 ಮಾರಿಟೈಮ್ ಆಪರೇಷನ್ಸ್ ಹೆಲಿಕಾಪ್ಟರ್ (HOM) ಏಳು ಸಿಬ್ಬಂದಿಯನ್ನು ಹೊಂದಿತ್ತು. ಆದರೆ ಇನ್ನೊಂದು, M502-6, ಮೂರು ಸದಸ್ಯರನ್ನು ಹೊಂದಿತ್ತು. ಎರಡೂ ಹೆಲಿಕಾಪ್ಟರ್‌ಗಳು ಮೇ 3-5ರಿಂದ ನಡೆಯಲಿರುವ ನೌಕಾಪಡೆಯ ದಿನ ಆಚರಣೆಗೆ ಸಂಬಂಧಿಸಿದ ತಾಲೀಮನ್ನು ಪಡೆಯುತ್ತಿದ್ದವು ಎಂದು ವರದಿಯಾಗಿದೆ

Ad Widget . Ad Widget .

Leave a Comment

Your email address will not be published. Required fields are marked *