Ad Widget .

ಲೋಕ ಚುನಾವಣೆ| 3 ದಿನ ಮದ್ಯ ಮಾರಾಟ ನಿಷೇಧ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಏಪ್ರಿಲ್ 26ರಂದು ನಡೆಯಲಿದೆ. ಈ ಹಿನ್ನೆಲೆ ಅಬ್ಬರದ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಸಂಜೆ 6 ಗಂಟೆಯಿಂದ 14 ಕ್ಷೇತ್ರಗಳಲ್ಲಿ 144 ಸೆಕ್ಷನ್​​​​​​ ಜಾರಿಯಾಗಿದ್ದು, ಸಭೆ, ಸಮಾರಂಭ, ಮೆರವಣಿಗೆ, ಧ್ವನಿವರ್ಧಕ ಬಳಕೆಗೆಲ್ಲ ಬ್ರೇಕ್​​ ಬಿದ್ದಿದೆ.

Ad Widget . Ad Widget .

ಅಷ್ಟೇ ಅಲ್ಲದೆ 14 ಕ್ಷೇತ್ರಗಳಲ್ಲಿ 3 ದಿನ ಮದ್ಯ ಮಾರಾಟ ನಿಷೇಧ ಮಾಡಿದ್ದು, ಇಂದು ಸಂಜೆ 6 ಗಂಟೆಯಿಂದಲೇ ಲಿಕ್ಕರ್ ಶಾಪ್​​ಗಳು ಕ್ಲೋಸ್​ ಆಗಿದ್ದು, ಶುಕ್ರವಾರದ ಏಪ್ರಿಲ್ 26ರಂದು ಮತದಾನ ಮುಗಿಯುವವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹೀಗಾಗಿ ಸಂಜೆ ಬಾರ್​​ಗಳು ಬಂದ್​​​ ಆಗುವ ಸಮಯ ಹತ್ತಿರ ಆಗುತ್ತಿದ್ದಂತೆಯೇ ಮದ್ಯ ಪ್ರಿಯರು ಓಡೋಡಿ ಹೋಗಿ ಎಣ್ಣೆ ಖರೀದಿಸಿದ್ದಾರೆ. ಮೂರು ದಿನಕ್ಕೆ ಆಗವಷ್ಟು ಮದ್ಯ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಕಂಡುಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *