Ad Widget .

ನೇಹಾ ಹತ್ಯೆ ಆರೋಪಿಗೆ 90 ದಿನಗಳಲ್ಲೇ ಗಲ್ಲು ಶಿಕ್ಷೆ: ಸುರ್ಜೇವಾಲ

ಸಮಗ್ರ ನ್ಯೂಸ್: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸುತ್ತೇನೆ. ಪ್ರಕರಣದ ತನಿಖೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸುವುದಾಗಿ ಎಐಸಿಸಿ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲ ಭರವಸೆ ನೀಡಿದ್ದಾರೆ.

Ad Widget . Ad Widget .

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆ 90 ದಿನಗಳಲ್ಲಿ ಪೂರ್ಣಗೊಳಿಸಿ ಆರೋಪಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು. ಆದರೆ ಈ ಪ್ರಕರಣವನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎಂದರು.

Ad Widget . Ad Widget .

ಈ ಹಿಂದೆ ಪರೇಶ್‌ ಮೇಸ್ತ ಸಾವಿನ ಪ್ರಕರಣವನ್ನೂ ಬಿಜೆಪಿಯವರು ರಾಜಕೀಯಗೊಳಿಸಿದ್ದರು. ಕೊನೆಗೆ ಅದು ಆಕಸ್ಮಿಕ ಮರಣ ಎಂದು ಸಿಬಿಐ ತನಿಖೆ ತಿಳಿಸಿತ್ತು. ನೇಹ ನಮ್ಮೆಲ್ಲರ ಪುತ್ರಿ, ಆರೋಪಿಯ ಬಂಧನವಾಗಿದೆ. ಪೂರ್ಣ ಶಕ್ತಿಯಿಂದ ತನಿಖೆ ನಡೆಸಲಾಗುವುದು ಎಂದರು.

Leave a Comment

Your email address will not be published. Required fields are marked *