Ad Widget .

ತುಮಕೂರು : ಹಿಂದುಗಳ ರಕ್ತ ತುಂಬಿ ಚೆಲ್ಲುತ್ತಿರೋದು ಕಾಂಗ್ರೆಸ್‌ ಚೊಂಬಿನ ಪ್ರತೀಕ-ಆರ್.ಅಶೋಕ್‌

ಸಮಗ್ರ ನ್ಯೂಸ್‌ : ಕಾಂಗ್ರೆಸ್ ಸರ್ಕಾರ ಬಂದ ಮೇಲೆ‌ ಹಿಂದುಗಳ ರಕ್ತಕ್ಕೆ ಬೆಲೆ ಇಲ್ಲದಂತಾಗಿದೆ. ಅವರ ಜಾಹೀರಾತಿನಲ್ಲಿ ಏನು ಚೊಂಬು ಕೊಟ್ಟಿದ್ದಾರೆ, ಅದರಲ್ಲಿ ಪೂರ್ತಿ ರಕ್ತ ತುಂಬಿದೆ. ಹಿಂದುಗಳ ರಕ್ತ ತುಂಬಿ ಚೆಲ್ಲುತ್ತಿರೋದು ಅವರ ಚೊಂಬಿನ ಪ್ರತೀಕ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.

Ad Widget . Ad Widget .

ನೇಹಾ ಹತ್ಯೆ ಖಂಡಿಸಿ ನಗರದಲ್ಲಿ ಬಿಜೆಪಿ-ಜೆಡಿಎಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು, ನಂತರ ಮಾತನಾಡಿದ ಅವರು, ಕಾಂಗ್ರೆಸ್ ಬಂತು ಭಯೋತ್ಪಾದನೆ ಬಂತು, ಕಾಂಗ್ರೆಸ್ ಬಂತು ನಕ್ಸಲ್ ಬಂತು, ಕಾಂಗ್ರೆಸ್ ಬಂತು ಲವ್ ಜಿಹಾದ್ ಬಂತು, ಲವ್ ಜಿಹಾದ್ ಹೆಸರಲ್ಲಿ ಕಗ್ಗೊಲೆಯಾಗಿರೋದನ್ನು ಇಡೀ ದೇಶ ನೋಡುತ್ತಿದೆ.

Ad Widget . Ad Widget .

ಸಿದ್ದರಾಮಯ್ಯನವರೇ ನಿಮ್ಮ ಹಿಂದು ವಿರೋಧಿ ನೀತಿ ಇದೇನು ಮೊದಲಲ್ಲ, ನಿಮ್ಮದೇ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಮುಸ್ಲಿಂ ಮೂಲಭೂತವಾದಿಗಳು ಬೆಂಕಿ ಹಚ್ಚಿದರು. ಆಗ ಬಾಯಿ ಮುಚ್ಚಿಕೊಂಡು ಸುಮ್ಮನಾದಿರಿ, ಈಗ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಹತ್ಯೆಯಾಗಿದೆ, ಈಗಲೂ ಮೌನವಾಗಿದ್ದೀರಿ. ಡಿ.ಕೆ. ಸುರೇಶ್ ಅವರ ಪ್ರಚಾರದಲ್ಲಿ ಮೂರು ದಿನದ ಹಿಂದೆ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ದಾರೆ. ಕಾಂಗ್ರೆಸ್ ನಾಯಕರು ದೇಶವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ಗೆ ಮಾನ, ಮರ್ಯಾದೆ, ನಾಚಿಕೆ ಯಾವುದೂ ಇಲ್ಲ. ಇಷ್ಟೆಲ್ಲಾ ಆದರೂ ರಾಜಾರೋಷವಾಗಿ ಓಡಾಡಿಕೊಂಡು ಇದ್ದಾರೆ. ಬೇರೆಯವರು ಯಾರಾದ್ರು ಸಿಎಂ ಆಗಿದ್ದರೆ ರಾಜೀನಾಮೆ ಕೊಟ್ಟು ಹೋಗುತ್ತಿದ್ದರು. ಇಡೀ ರಾಜ್ಯದಲ್ಲಿ ಒಂದು ರೀತಿ ಭಯೋತ್ಪಾದನೆ ರೀತಿ ಕೃತ್ಯಗಳು ನಡೆಯುತ್ತಿವೆ. ನೇಹಾ ಕೊಲೆ ಪ್ರಕರಣದಲ್ಲಿ ಅವರ ತಂದೆ ತಾಯಿ, ನೀವು ಹೀಗೆ, ಮುಸ್ಲಿಂರನ್ನು ಓಲೈಕೆ ಮಾಡುತ್ತಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಂದಿದ್ದಾರೆ. ನಾಡಿನ ಹೆಣ್ಣು ಮಕ್ಕಳಿಗೆ ಇವತ್ತು ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.

ನೇಹಾ ಕೇಸ್‌ನಲ್ಲಿ ಕಾಂಗ್ರೆಸ್‌ನವರು ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಕಾಲೇಜ್ ಕ್ಯಾಂಪಸ್‌ಗಳು ಸೇಫ್‌ ಇಲ್ಲವೆಂದರೆ ಈ ಸರ್ಕಾರ ನಡೆಸುವ ಕಾಂಗ್ರೆಸ್ ರಾಜ್ಯವನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದೆ‌. ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರವಿದೆ, ಮುಸಲ್ಮಾನ್ ಭಯೋತ್ಪಾದಕರು ಏನು ಮಾಡಿದರೂ ನಾವು ರಕ್ಷಣೆ ಮಾಡುತ್ತೀವಿ ಅಂತ ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಈ ರಾಜ್ಯದಲ್ಲಿ ಜೈ ಶ್ರೀರಾಮ್ ಅಂತ ಕೂಗೋದು ಅಪರಾಧವೇ ಎಂದು ಕಿಡಿಕಾರಿದರು.

Leave a Comment

Your email address will not be published. Required fields are marked *