ಸುಳ್ಯ: ವರ್ಷ ಕಳೆದರೂ ಉದ್ಘಾಟನೆ‌ ಭಾಗ್ಯ ಕಾಣದ ವಿದ್ಯುತ್ ಪರಿವರ್ತಕ| ಮನವಿಗಳಿಗೂ ಕಿಮ್ಮತ್ತು ಕೊಡದ ಮೆಸ್ಕಾಂ

ಸಮಗ್ರ ನ್ಯೂಸ್: ಸ್ಥಾಪನೆ ಮಾಡಿ ಎರಡು ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಕಲ್ಪಿಸದೇ ಟ್ರಾನ್ಸ್ ಫಾರ್ಮರ್ ಒಂದಕ್ಕೆ ಗ್ರಹಣ ಹಿಡಿದ ಘಟನೆ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಕಂಡುಬರುತ್ತಿದೆ.

Ad Widget ... ..

ಐವರ್ನಾಡು ಗ್ರಾಮದ ಬದಂತಡ್ಕ ಕೊಯಿಲ ಎಂಬಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಕಳೆದ ಒಂದು ವರ್ಷಗಳ ಹಿಂದೆ ಟಿಸಿ ಅಳವಡಿಸಲಾಗಿತ್ತು.‌ ಆರಂಭದಲ್ಲಿ ಚುರುಕಿನಿಂದ‌ ಕೆಲಸ ಪ್ರಾರಂಭಿಸಿ ಟಿಸಿ ಸ್ಥಾಪನೆ ಮಾಡಲಾಗಿದೆ. ಅದಾದ‌ ಬಳಿಕ ಸಂಪರ್ಕ ಇದುವರೆಗೆ ಲಭಿಸಿಲ್ಲ.

Ad Widget

ಈ ಕುರಿತಂತೆ ಗ್ರಾಮಸ್ಥರು ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ಇನ್ನು ಈ ಟಿಸಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಯಾವ ಅಧಿಕಾರಿಗೆ ಶಾಕ್ ಟ್ರೀಟ್ ಮೆಂಟ್ ಕೊಡಬೇಕೋ ಎಂದು ತಿಳಿಯದೆ ಗ್ರಾಮಸ್ಥರು ‌ಕಂಗಲಾಗಿದ್ದಾರೆ. ಈ ಪರಿವರ್ತಕಕ್ಕೆ ಹಿಡಿದ ಗ್ರಹಣ ಮೋಕ್ಷ ಮಾಡುವಂತೆ ನಾಗರೀಕರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *