Ad Widget .

ಬೆಳಗಾವಿಯಲ್ಲಿ ಲವ್ ಜಿಹಾದ್ ಗೆ ಒತ್ತಾಯ| ಲೈಂಗಿಕ ದೌರ್ಜನ್ಯವೆಸಗಿ, ಖಾಸಗಿ ಫೋಟೋ ವೈರಲ್ ಮಾಡುವಂತೆ ಬೆದರಿಕೆ

ಸಮಗ್ರ ನ್ಯೂಸ್: ಇತ್ತ ಹುಬ್ಬಳ್ಳಿಯಲ್ಲಿ ನೇಹಾ ವಿಚಾರ ಜೋರಾಗಿ ಸದ್ದು ನಡೆಯುತ್ತಿದರೆ. ಬೆಳಗಾವಿಯಲ್ಲು ಲವ್ ಜಿಹಾದ್‌ನ ಮತ್ತೊಂದು ಕರಾಳ ಮುಖ ಅನಾವರಣಗೊಂಡಿದೆ. ಹಿಂದೂ ಯುವತಿಗೆ ಕೆಲಸ ಕೊಡಿಸುತ್ತೇನೆಂದು ಲೈಂಗಿಕ ದೌರ್ಜನ್ಯವೆಸಗಿ, ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

Ad Widget . Ad Widget .

ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಸಂತ್ರಸ್ತ ಮಹಿಳೆ ವಾಸವಾಗಿದ್ದಾರೆ. ಸಂತ್ರಸ್ತ ಮಹಿಳೆಯ ಪತಿ ಮುನವಳ್ಳಿ ಪಟ್ಟಣದಲ್ಲಿ ಕಿರಾಣಿ ಅಂಗಡಿ ಹೊಂದಿದ್ದಾರೆ. ಪತಿ ಇಲ್ಲದಿದ್ದಾಗ ಈ ಮಹಿಳೆ ಕಿರಾಣಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಈ ವಿಚಾರ ತಿಳಿದ ಆರೋಪಿ ಆರೀಫ್ ಬೇಪಾರಿ ಮಹಿಳೆಯನ್ನು ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ. ನಂತರ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯನ್ನು ಬೆಳಗಾವಿಗೆ ಕರೆತಂದು ನಿರಂತರ ‌ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

Ad Widget . Ad Widget .

ಬೆಳಗಾವಿ ಬಂದ ಬಳಿಕ ಆರೀಫ್‌ಗೆ ಮತ್ತೆ ಐವರು ಜೊತೆ ಸೇರಿದ್ದು, ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯ ಖಾಸಗಿ ಫೋಟೋಗಳನ್ನು ಸೆರೆಹಿಡಿದು, ಮತಾಂತರಗೊಳ್ಳುವಂತೆ ಬ್ಯ್ಲಾಕ್​ ಮೇಲ್ ಮಾಡಿದ್ದಾರೆ. ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳ್ಳು” ಇಲ್ಲದಿದ್ದರೆ ಫೋಟೋ ವೈರಲ್ ಮಾಡುತ್ತೇವೆ ಅಂತ ಬ್ಯ್ಲಾಕ್​ ಮೇಲೆ ಮಾಡಿ, ಹಣೆಗೆ ಕುಂಕುಮ ಹಚ್ಚುವುದನ್ನು ನಿಲ್ಲಿಸಬೇಕು, ಹಿಂದೂ ಸಂಪ್ರದಾಯ ಬಿಡಬೇಕು. ನಿತ್ಯ ಬುರ್ಖಾ ಧರಿಸುವ ಜೊತೆಗೆ ಐದು ಸಲ ನಮಾಜ್ ಮಾಡಬೇಕು ಅಂತ ಕಾಡಿದ್ದಾರೆ. ಅಲ್ಲದೆ ದುಷ್ಕರ್ಮಿಗಳು ಒತ್ತಾಯ ಪೂರ್ವಕವಾಗಿ ಮಹಿಳೆಗೆ ಬುರ್ಖಾ ಧಾರಣೆ ‌ಮಾಡಿಸಿದ್ದಾರೆ.

ಇತ್ತ ಸಂತ್ರಸ್ತ ಮಹಿಳೆ ಏಳು ಜನ ಆರೋಪಿಗಳ ವಿರುದ್ಧ ಸವದತ್ತಿ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾರೆ. ಮುನವಳ್ಳಿ ಪಟ್ಟಣದ ಆರೀಫ್ ‌ಬೇಪಾರಿ, ಆದೀಲ್, ಶೋಯಲ್, ಮುಕ್ತಮ್, ಉಮರ್, ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೂಡಲೆ ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ಸಂತ್ರಸ್ತ ಮಹಿಳೆ ಆಗ್ರಹಿಸಿದ್ದಾರೆ

Leave a Comment

Your email address will not be published. Required fields are marked *