Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ನಿಮ್ಮ ರಾಶಿಗಳಿಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಏಪ್ರಿಲ್ 21ರಿಂದ 27ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Ad Widget . Ad Widget .

ಮೇಷ ರಾಶಿ:
ಆರೋಗ್ಯದಲ್ಲಿನ ತೊಂದರೆಯು ಮರೆಯಾಗುತ್ತದೆ. ಕುಟುಂಬದ ಹಣಕಾಸಿನ ಸಮಸ್ಯೆ ಕ್ರಮೇಣ ಸುಧಾರಿಸುತ್ತದೆ. ಬಹುದಿನದಿಂದ ಕಾಡುತ್ತಿದ್ದ ನಿರುದ್ಯೋಗ ಸಮಸ್ಯೆವೊದಕ್ಕೆ ಪರಿಹಾರ ದೊರೆಯಲಿದೆ. ಕುಟುಂಬದ ಹೆಚ್ಚಿನ ಜವಾಬ್ದಾರಿ ಹೊರುವಿರಿ. ಸೋದರಿಯ ಆಗಮನ ಹೊಸ ಚೈತನ್ಯವನ್ನು ನೀಡುತ್ತದೆ. ದಾಂಪತ್ಯ ಜೀವನ ಸಂತಸದಿಂದ ಕೂಡಿರುತ್ತದೆ. ಅನಿರೀಕ್ಷಿತ ಧನ ಲಾಭವಿದೆ. ಉದ್ಯೋಗಸ್ಥರು ಒತ್ತಡಕ್ಕೆ ಒಳಗಾಗುತ್ತಾರೆ. ಬುದ್ದಿವಂತಿಕೆಯ ನಿರ್ಧಾರದಿಂದ ಮಕ್ಕಳಿಗೆ ಅಧಿಕಾರ ದೊರೆಯಲಿದೆ. ಆತ್ಮೀಯರ ಸಹಾಯದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ದೂರದ ಊರಿಗೆ ಶುಭ ಕಾರ್ಯಕ್ರಮ ಒಂದಕ್ಕೆ ತೆರಳಬೇಕಾಗುತ್ತದೆ.

Ad Widget . Ad Widget .

ವೃಷಭ ರಾಶಿ:
ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸುವುದಿಲ್ಲ. ಮೂಗು ಅಥವಾ ಗಂಟಲಲ್ಲಿ ಸೋಂಕು ಉಂಟಾಗಬಹುದು. ಕುಟುಂಬದ ಸಮಸ್ಯೆಯೊಂದು ಬಗೆಹರಿಯದೆ ವಿವಾದಕ್ಕೆ ಸಿಲುಕುವಿರಿ. ಸ್ವಂತ ಜಮೀನು ಅಥವಾ ಮನೆಯನ್ನು ಕೊಳ್ಳುವ ಸೂಚನೆಗಳಿವೆ. ಅಧಿಕಾರಿಗಳಾದಲ್ಲಿ ವಿಶೇಷವಾದ ಪ್ರಶಸ್ತಿಗೆ ಭಾಜನರಾಗುವಿರಿ. ರಕ್ತಕ್ಕೆ ಸಂಬಂಧಪಟ್ಟ ದೋಷವಿದ್ದಲ್ಲಿ ಎಚ್ಚರಿಕೆ ವಹಿಸಿ. ಆತ್ಮೀಯರ ಸಲಹೆ ಸೂಚನೆಗಳನ್ನು ಪಾಲಿಸುವುದು ಒಳ್ಳೆಯದು. ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಸಂಗಾತಿಯೊಂದಿಗೆ ಆತ್ಮೀಯರ ಮನೆಗೆ ತೆರಳುವಿರಿ. ಕಷ್ಟನಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ. ಪ್ರಾಣಿಗಳ ಬಗ್ಗೆ ಕರುಣೆ ತೋರುವಿರಿ.

ಮಿಥುನ ರಾಶಿ:
ಕ್ರೀಡಾ ಮನೋಭಾವನೆ ಇರುವ ಕಾರಣ ಮಾನಸಿಕ ಒತ್ತಡ ದೂರವಾಗುತ್ತದೆ. ಅನಿರೀಕ್ಷಿತ ಧನ ಲಾಭವಿದೆ. ಹಣಕಾಸಿನ ವಿಚಾರಗಳಲ್ಲಿ ಸ್ಥಿರ ನಿರ್ಧಾರ ತೆಗೆದುಕೊಳ್ಳುವಿರಿ. ಅತಿಯಾದ ಶಿಸ್ತಿನ ಜೀವನ ಬೇರೆಯವರಿಗೆ ಬೇಸರವನ್ನು ಉಂಟುಮಾಡುತ್ತದೆ. ಸಂಗಾತಿಯ ಸಹಕಾರದೊಂದಿಗೆ ನಡೆಸುವ ಉದ್ಯಮಯಲ್ಲಿ ಉತ್ತಮ ಲಾಭ ದೊರೆಯುತ್ತದೆ. ಸಂತಾನ ಭಾಗ್ಯವಿದೆ. ಕುಟುಂಬದಲ್ಲಿ ನಡೆಯುವ ಮಂಗಳ ಕಾರ್ಯದ ಜವಾಬ್ದಾರಿ ನಿಮ್ಮದಾಗುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆ ದೈಹಿಕ ಶಕ್ತಿಯನ್ನು ಕುಂದಿಸುತ್ತದೆ. ಒತ್ತಡಕ್ಕೆ ಒಳಗಾಗಿ ಅನಿವಾರ್ಯವಾಗಿ ಉದ್ಯೋಗವನ್ನು ಬದಲಾಯಿಸುವಿರಿ.

ಕಟಕ ರಾಶಿ:
ಕುಟುಂಬದ ಮೇಲಿನ ಜವಾಬ್ದಾರಿ ಹೆಚ್ಚಾಗುತ್ತದೆ. ಮನಸ್ಸು ಎಷ್ಟೇ ಒಳ್ಳೆಯದಾದರೂ ಆಡುವ ಮಾತಿನಿಂದ ನಿಮ್ಮನ್ನು ತಪ್ಪಾಗಿ ಭಾವಿಸುತ್ತಾರೆ. ಕುಟುಂಬದಲ್ಲಿನ ಹಣಕಾಸಿನ ವ್ಯವಹಾರಗಳ ಅಂತಿಮ ತೀರ್ಮಾನ ತೆಗೆದುಕೊಳ್ಳುವಿರಿ. ಉದ್ಯೋಗಸ್ಥರಲ್ಲಿ ಕಾರ್ಯದ ಒತ್ತಡ ಹೆಚ್ಚುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಕ್ರೀಡಾಪಟುಗಳು ವಿಶೇಷವಾದ ಗೌರವಕ್ಕೆ ಪಾತ್ರರಾಗುತ್ತಾರೆ. ಕುಟುಂಬದಲ್ಲಿನ ಸಮಸ್ಯೆಗಳು ಸುಲಭವಾಗಿ ಬಗೆಹರಿಯಲಿವೆ. ವಾಸ ಸ್ಥಳ ಬದಲಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ವಿಶೇಷವಾದ ಅಧಿಕಾರ ದೊರೆಯುತ್ತದೆ. ಮಾನಸಿಕ ಒತ್ತಡದಿಂದ ಬಳಲುವಿರಿ.

ಸಿಂಹ ರಾಶಿ:
ಕ್ಲಿಷ್ಟಕರ ಪರಿಸ್ಥಿತಿ ಎದುರಾದರೂ ಕೈಗೊಂಡ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ಎದುರಾಗುವ ಅಡಚಣೆಗಳನ್ನು ಆತ್ಮವಿಶ್ವಾಸದಿಂದ ಬಗೆಹರಿಸಿ ಮುನ್ನಡೆಯುವಿರಿ. ಅಜೀರ್ಣ ಮತ್ತು ಕೀಲು ನೋವಿನ ತೊಂದರೆ ಇರುತ್ತದೆ. ಸಮಾಜದಲ್ಲಿ ವಿಶೇಷವಾದ ಸ್ಥಾನಮಾನ ದೊರೆಯುತ್ತದೆ. ಅಧಿಕಾರ ವರ್ಗಕ್ಕೆ ವಿಶೇಷವಾದ ಸವಲತ್ತುಗಳು ದೊರೆಯುತ್ತವೆ. ಕಷ್ಟ ನಷ್ಟದಲ್ಲಿ ಇದ್ದವರಿಗೆ ಹಣದ ಸಹಾಯ ಮಾಡುವಿರಿ. ಸೋತವರು ಮತ್ತೆ ಗೆಲ್ಲಲು ಪ್ರೋತ್ಸಾಹ ಮತ್ತು ಸ್ಪೂರ್ತಿಯನ್ನು ನೀಡುವಿರಿ. ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಉದ್ಯೋಗ ಗಳಿಸುತ್ತಾರೆ. ತಂದೆಯವರಿಂದ ಹಣದ ಸಹಾಯ ದೊರೆಯುತ್ತದೆ. ಸ್ವಂತ ಉದ್ದಿಮೆಯನ್ನು ಆರಂಭಿಸುವ ಕನಸು ನನಸಾಗಲಿದೆ

ಕನ್ಯಾ ರಾಶಿ:
ದುಡುಕಿ ಖರ್ಚು ಮಾಡಿ ಚಿಂತೆಗೆ ಒಳಗಾಗುವಿರಿ. ಆದಾಯಕ್ಕೆ ಸಮನಾದ ಖರ್ಚು ವೆಚ್ಚಗಳಿರುತ್ತವೆ. ಮಾತಿನಲ್ಲಿ ಚತುರತೆ ಇರುತ್ತದೆ. ಸುಲಭದಲ್ಲಿ ಪೂರ್ಣಗೊಳ್ಳುವ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವಿರಿ. ಆತ್ಮವಿಶ್ವಾಸದಿಂದ ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಸಾಗುತ್ತವೆ. ವಿದ್ಯಾರ್ಥಿಗಳು ಆತುರದ ನಿರ್ಧಾರ ತೆಗೆದುಕೊಳ್ಳಬಹುದು. ಉತ್ತಮ ಮಾರ್ಗದರ್ಶನದಿಂದ ಎಲ್ಲವೂ ಸಾಧ್ಯ. ಹಣಕಾಸು ನಿರ್ವಹಣೆಯ ಹುದ್ದೆಯಲ್ಲಿ ಹೆಚ್ಚಿನ ಜವಾಬ್ದಾರಿ ದೊರೆಯುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಅನಿರೀಕ್ಷಿತವಾದ ಖರ್ಚು ವೆಚ್ಚಗಳು ಎದುರಾದರೂ ತೊಂದರೆ ಕಾಣದು.

ತುಲಾ ರಾಶಿ:
ಅನಿರೀಕ್ಷಿತ ವರಮಾನ ಜೀವನದಲ್ಲಿ ಹುಮ್ಮಸ್ಸು ತುಂಬಲಿದೆ. ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಬೇರೆಯವರು ಮಾಡುವ ಕೆಲಸದಲ್ಲಿ ತಪ್ಪನ್ನು ಹುಡುಕುವಿರಿ. ನಿಮ್ಮ ತಪ್ಪನ್ನು ಮರೆ ಮಾಚುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯ ಆಗಲಿದೆ. ಬಂದು ಬಳಗದವರ ಸಹಾಯ ಸಹಕಾರ ದೊರೆಯುತ್ತದೆ. ದೂರದ ಸಂಬಧಿಕರೊಬ್ಬರು ಪಾಲುಗಾರಿಕೆಯ ವ್ಯಾಪಾರವನ್ನು ನಿಮ್ಮೊಂದಿಗೆ ಆರಂಭಿಸಲಿದ್ದಾರೆ. ಸಂಗಾತಿಯ ಸಹಾಯದಿಂದ ಸ್ವಗೃಹ ಲಾಭವಿದೆ. ಕೈಹಿಡಿದ ಕಾರ್ಯಗಳು ಪೂರ್ಣವಾಗುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ. ಭೂವಿವಾದವೊಂದು ಪರಿಹಾರವಾಗಲಿದೆ. ವಿದೇಶ ಪ್ರಯಾಣ ಯೋಗವಿದೆ.

ವೃಶ್ಚಿಕ ರಾಶಿ:
ಭೂವ್ಯವಹಾರದಲ್ಲಿ ವಿವಾದ ಎದುರಾಗಲಿದೆ. ಯಂತ್ರೋಪಕರಣಗಳ ವ್ಯಾಪಾರದಲ್ಲಿ ಹೇರಳ ಲಾಭವಿದೆ. ಎಲ್ಲರೊಂದಿಗೆ ಆತ್ಮೀಯತೆಯಿಂದ ವರ್ತಿಸುವಿರಿ. ನಿಮ್ಮ ತೊಂದರೆ ದೂರವಾಗಲು ಆತ್ಮೀಯರು ಪ್ರಯತ್ನಿಸುತ್ತಾರೆ. ಕಂತಿನ ವ್ಯಾಪಾರದಲ್ಲಿ ಲಾಭವಿದೆ. ತಂದೆಯವರ ಆಸ್ತಿಯ ವಿಚಾರದಲ್ಲಿನ ಮನಸ್ತಾಪ ಕೊನೆಗೊಳ್ಳುತ್ತದೆ. ಕುಟುಂಬದ ವಿಚಾರದಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತದೆ. ಮಕ್ಕಳಿಗೆ ತಾತನ ಸಹಾಯ ಸಹಕಾರ ದೊರೆಯುತ್ತದೆ. ಬೇಸರ ಕಳೆಯಲು ಪತಿಯ ಜೊತೆ ಯಾತ್ರಾಸ್ಥಳಕ್ಕೆ ಬೇಟಿ ನೀಡುವಿರಿ. ಯಾವುದೇ ವಾದ ವಿವಾದಗಳನ್ನು ಸುಲಭವಾಗಿ ಬಗೆಹರಿಸಬಲ್ಲಿರಿ. ಅತಿಯಾದ ಕೋಪ ಆತ್ಮೀಯರನ್ನು ದೂರ ಮಾಡಬಹುದು. ಹೈನು ವ್ಯಾಪಾರ ಅಥವ ಹೋಟೆಲ್ ವ್ಯಾಪಾರದಲ್ಲಿ ಲಾಭ ದೊರೆಯಲಿದೆ.

ಧನಸ್ಸು ರಾಶಿ:
ಎದುರಾಗುವ ಅಡಚಣೆಗಳು ತ್ವರಿತಗತಿಯಲ್ಲಿ ಪರಿಹಾರಗೊಳ್ಳುವುದು. ವಿದ್ಯಾರ್ಥಿಗಳಿಗೆ ಶುಭವಿದೆ. ಗೆಲ್ಲುವವರೆಗೂ ಕೈಹಿಡಿದ ಕೆಲಸ ಕಾರ್ಯಗಳಿಂದ ಹಿಂದೆ ಸರಿಯುವುದಿಲ್ಲ. ಕುಟುಂಬದ ಸದಸ್ಯರ ಸಹಾಯ ಸಹಕಾರ ಇರುತ್ತದೆ. ಕುಟುಂಬದ ಕೆಲಸವನ್ನು ಯಶಸ್ವಿಯಾಗಿ ಪೂರೈಸಬಲ್ಲಿರಿ. ವಿದೇಶಕ್ಕೆ ತೆರಳುವ ಅವಕಾಶ ದೊರೆಯಲಿದೆ. ಉದ್ಯೋಗದಲ್ಲಿ ಅನಿರೀಕ್ಷಿತ ಯಶಸ್ಸನ್ನು ಆನಂದಿಸುವಿರಿ. ಆದಾಯ ಹೆಚ್ಚಿಸಿಕೊಳ್ಳಲು ಉಪವೃತ್ತಿಯನ್ನು ಆರಂಭಿಸುವಿರಿ. ಕೆಲಸದ ನಡುವೆ ವಿಶ್ರಾಂತಿಯ ಅಗತ್ಯವಿದೆ. ತಾಯಿಯ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ. ಮುಂಗೋಪದಲ್ಲಿ ತಪ್ಪು ಮಾಡಿ ನಂತರ ಪಶ್ಚಾತಾಪ ಪಡುವಿರಿ. ಆಪತ್ಕಾಲಕ್ಕೆ ಹಣ ಉಳಿಸಲು ಸಫಲರಾಗುವಿರಿ. ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸುವ ಸೂಚನೆಗಳಿವೆ.

ಮಕರ ರಾಶಿ:
ಏಕಾಂಗಿತನವನ್ನು ಇಷ್ಟಪಡುವಿರಿ. ಬೇಸರವಾದಲ್ಲಿ ಉದ್ವೇಗದಿಂದ ವರ್ತಿಸುವಿರಿ. ಬೇಸರ ದೂರವಾಗಲು ಮನರಂಜನಾ ಮಾಧ್ಯಮವನ್ನು ಅವಲಂಬಿಸುವಿರಿ. ಬೇರೆಯವರ ಜೊತೆಯಲ್ಲಿ ಮಾತನಾಡುವಾಗ ಎಚ್ಚರಿಕೆ ಇರಲಿ. ದಾಂಪತ್ಯದಲ್ಲಿದ್ದ ಮನಸ್ತಾಪ ಕೊನೆಯಾಗುವುದು. ಶಾಂತಿ ಸಂಮಯದಿಂದ ವರ್ತಿಸುವ ಜನರನ್ನು ಗಳಿಸುವಿರಿ. ಕುಟುಂಬದ ಹಿರಿಯ ವ್ಯಕ್ತಿಗಳಿಗೆ ಭೂಮಿ ಅಥವಾ ಮನೆ ಕೊಳ್ಳುವ ಸಾಧ್ಯತೆಗಳು ಇರುತ್ತವೆ. ಅಧಿಕಾರಿಗಳಿಗೆ ಕಾರ್ಮಿಕರ ಸಹಕಾರ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಮಕ್ಕಳ ವಿರೋಧ ಉಂಟಾಗುತ್ತದೆ. ಶಾಂತಿ ಸಂಧಾನ ಸಭೆಯಿಂದ ದೊಡ್ಡ ಸವಾಲೊಂದು ಮರೆಯಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಕುಂಭ ರಾಶಿ:
ತಾಯಿಯ ಹೆಸರಿನಲ್ಲಿದ್ದ ಹಣದ ವಿವಾದ ಅಂತ್ಯಗೊಳ್ಳುತ್ತದೆ. ನಿಮ್ಮ ಮನದಲ್ಲಿ ಇರುವ ಯೋಚನೆಯನ್ನು ಅರಿಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಸೋದರಿಯ ಸಂಸಾರದ ಸಮಸ್ಯೆಯನ್ನು ಬಗೆಹರಿಸುವಿರಿ. ಅವಕಾಶ ದೊರೆತು ವೃತ್ತಿ ಬದಲಾಯಿಸಿದಲ್ಲಿ ತೊಂದರೆ ಉಂಟಾಗುವುದಿಲ್ಲ. ಸೋದರಮಾವನ ಸಹಾಯ ಸಹಕಾರ ಜೀವನದ ಯಶಸ್ಸಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭಫಲಗಳು ದೊರೆಯುತ್ತವೆ. ಹಟದ ಸ್ವಭಾವದಿಂದ ಹಣಕಾಸಿನ ವಿಚಾರದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಕುಟುಂಬದ ಸದಸ್ಯರ ಜೊತೆ ಹುಟ್ಟೂರಿಗೆ ಪ್ರಯಾಣ ಬೆಳೆಸುವಿರಿ. ಪಶು ಸಂಗೋಪನೆಯಲ್ಲಿ ಅಧಿಕ ಲಾಭ ದೊರೆಯುತ್ತದೆ.

ಮೀನ ರಾಶಿ:
ಸರ್ಕಾರಿ ನೌಕರರಿಗೆ ವಿಶೇಷವಾದ ಪ್ರಾತಿನಿಧ್ಯ ದೊರೆಯುತ್ತದೆ. ಅಧಿಕಾರದ ಆಸೆಯಿಂದ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವಿರಿ. ಹೊಸ ವ್ಯಾಪಾರದ ವಿಚಾರ ಮುಂದಕ್ಕೆ ಹೋಗಲಿದೆ. ತಂದೆಯ ಜೊತೆಯಲ್ಲಿನ ಪಾಲುಗಾರಿಕೆಯ ವ್ಯಾಪಾರದಲ್ಲಿ ವಿಶೇಷ ಲಾಭವಿದೆ. ಮಾತಿನ ಮೋಡಿಯಿಂದ ಎಲ್ಲರನ್ನೂ ಗೆಲ್ಲಬಲ್ಲಿರಿ. ಹಣಕಾಸಿನ ತೊಂದರೆ ಎದುರಾಗದು. ಸತತ ಶ್ರಮದ ಕೆಲಸದಿಂದಾಗಿ ಬೇಸರ ಮೂಡಲಿದೆ. ದೈಹಿಕ ದೌರ್ಬಲ್ಯತೆ ಕಾಡುತ್ತದೆ. ಹಣಕಾಸಿನ ಸಂಸ್ಥೆಯನ್ನು ಆರಂಭಿಸುವ ಸೂಚನೆಗಳಿವೆ. ಸಮಾಜಸೇವೆ ಮಾಡುವ ಆಸೆ ನಿಮ್ಮಲ್ಲಿರುತ್ತದೆ. ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ಕಾತರದಿಂದ ಕಾಯುತ್ತಾರೆ. ಮನದಲ್ಲಿ ಆತಂಕ ಮನೆ ಮಾಡಿರುತ್ತದೆ. ಧಾರ್ಮಿಕ ಕೇಂದ್ರದ ನಿರ್ವಹಣೆಯ ಜವಾಬ್ದಾರಿ ದೊರೆಯುತ್ತದೆ.

Leave a Comment

Your email address will not be published. Required fields are marked *