Ad Widget .

ಸುಳ್ಯ: ಪಯಸ್ವಿನಿಯಲ್ಲಿ ಮುಳುಗಿ ಯುವಕ ಸಾವು

ಸಮಗ್ರ ನ್ಯೂಸ್: ಸ್ನಾನ ಮಾಡುವ ವೇಳೆ ಮಂಡೆಕೋಲು ಗ್ರಾಮದ ಪಯಸ್ವಿನಿ ನದಿಯಲ್ಲಿ ಮುಳುಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಎ.17ರಂದು ಸಂಜೆ ಬಳಿಕ ಸಂಭವಿಸಿದೆ. ಮೃತನನ್ನು ಈಶ್ವರಮಂಗಲದ ಪ್ರವೀಣ್‌(38) ಎಂದು ಗುರುತಿಸಲಾಗಿದೆ.

Ad Widget . Ad Widget .

ಪ್ರವೀಣ್‌ ಅವರು ಎ.17ರಂದು ತನ್ನ ಸ್ನೇಹಿತರೊಂದಿಗೆ ಮಂಡೆಕೋಲು ಗ್ರಾಮದ ಪರಪೆಗಮಂನ್‌ ಗಾಯ ಎಂಬಲ್ಲಿ ಹರಿಯುವ ಪಯಸ್ವಿನಿ ನದಿಗೆ ಮೀನು ಹಿಡಿಯಲು ತೆರಳಿದ್ದವರು, ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಪ್ರವೀಣ್‌ ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಕೂಡಲೇ ಅಲ್ಲಿದ್ದವರು ಇತರರಿಗೆ ಮಾಹಿತಿ ನೀಡಿದ್ದಾರೆ.

Ad Widget . Ad Widget .

ಅಲ್ಲಿಗೆ ಪೈಚಾರಿನ ಮುಳುಗು ತಜ್ಞರ ತಂಡ ಆಗಮಿಸಿ ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಮೇಲೆತ್ತಿದ್ದು, ಅದಾಗಲೇ ಆ ವ್ಯಕ್ತಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *