Ad Widget .

‘ಕಲ್ಕಿ 2898 ಎಡಿ’ ಚಿತ್ರದ ಅಮಿತಾಭ್ ಬಚ್ಚನ್ ಪೋಸ್ಟರ್ ರಿಲೀಸ್‌

ಸಮಗ್ರ ನ್ಯೂಸ್‌ : ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಿಗ್ ಬಿ ಲುಕ್ ಹೇಗಿರಲಿದೆ ಎಂಬ ಕುತೂಹಲ ಮನೆ ಮಾಡಿತ್ತು. ಇದೀಗ ಚಿತ್ರತಂಡ ಅಮಿತಾಭ್ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ.

Ad Widget . Ad Widget .

ಕಲ್ಕಿ ಸಿನಿಮಾದಲ್ಲಿ ಬಿಗ್ ಬಿ ಪಾತ್ರದ ಪೋಸ್ಟರ್ ರಿವೀಲ್ ಮಾಡುವ ಮೂಲಕ ನಿರೀಕ್ಷೆ ಹುಟ್ಟಿಸಿದ್ದಾರೆ. ದೇವಸ್ಥಾನದ ಎದುರು ಬಿಗ್ ಬಿ ಕುಳಿತಿದ್ದು, ಕಣ್ಣಿಗೆ ಸೂರ್ಯ ಕಿರಣ ಬಿದ್ದಿದೆ. ಮೈತುಂಬಾ ಬಟ್ಟೆ ಸುತ್ತಿಕೊಂಡಿದ್ದು, ನೋಟ ಖಡಕ್ ಆಗಿದೆ. ಪೋಸ್ಟರ್‌ನಲ್ಲಿ ಈಗ ಸಮಯ ಬಂದಿದೆ ಎಂದು ಅಡಿಬರಹ ನೀಡಿದ್ದಾರೆ.

Ad Widget . Ad Widget .

ಸಿನಿಮಾದಲ್ಲಿ ಪ್ರಭಾಸ್ ಜೊತೆ ಕಮಲ್ ಹಾಸನ್, ಅಮಿತಾಭ್ ಬಚ್ಚನ್, ದಿಶಾ ಪಟಾನಿ, ದೀಪಿಕಾ ಪಡುಕೋಣೆ ಅವರಂತಹ ಸೂಪರ್ ಸ್ಟಾರ್ ಕಲಾವಿದರು ಅಭಿನಯಿಸುತ್ತಿದ್ದಾರೆ. ಆ ಕಾರಣದಿಂದಲೂ ನಿರೀಕ್ಷೆ ಹೆಚ್ಚಾಗಿದೆ. ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡುತ್ತಿದ್ದು, ‘ವೈಜಯಂತಿ ಮೂವೀಸ್’ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ.

Leave a Comment

Your email address will not be published. Required fields are marked *