ಸಮಗ್ರ ನ್ಯೂಸ್:ಮೊನ್ನೆ( ಏಪ್ರಿಲ್ 08) ರಂದು ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಸಿಎಂ ಸಿದ್ದರಾಮಯ್ಯ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ವ್ಯಕ್ತಿಯೋರ್ವ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಸಿದ್ದರಾಮಯ್ಯಗೆ ಹೂವಿನ ಹಾರ ಹಾಕಿ ತೆರಳಿದ್ದ. ಇದರಿಂದ ಪೊಲೀಸರ ಭದ್ರತಾ ಲೋಪ ಕಂಡುಬಂದಿತ್ತು. ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಲೋಪ ಸಂಬಂಧ ಪಿಎಸ್ಐ, ಎಎಸ್ಐ ಸೇರಿ ಒಟ್ಟು ನಾಲ್ವರನ್ನು ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ದಯಾನಂದ್ ಬಿ. ಆದೇಶಿಸಿದ್ದಾರೆ.
ಎಪ್ರಿಲ್ 8ರಂದು ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ರಿಯಾಜ್ ಎಂಬಾತ ಪಿಸ್ತೂಲ್ ಇಟ್ಕೊಂಡು ಬಂದು ಹಾರ ಹಾಕಿದ್ದ. ಈ ಘಟನೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ನಂತರ ಆತನನ್ನು ಸಿದ್ದಾಪುರ ಪೊಲೀಸ್ರು ತನಿಖೆ ನಡೆಸಿ ಕಳುಹಿಸಿದ್ದರು. ಘಟನೆಯಾದ ಎರಡು ವಾರಗಳ ನಂತರ ಸಿಎಂ ಭದ್ರತಾ ಕರ್ತವ್ಯದಲ್ಲಿದ್ದ ಸಿದ್ದಾಪುರ ಸಬ್ ಇನ್ಸ್ಪೆಕ್ಟರ್ ಮೆಹಬೂಬ, ASI ನಾಗರಾಜು ಹಾಗೂ ಇಬ್ಬರು ಸಿಬ್ಬಂದಿ ಅಮಾನತು ಮಾಡಿ ಆದೇಶ ಹೊರಡಿಸಿದೆ.