Ad Widget .

ಅಪಘಾತ ವಲಯವಾದ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ

ಸಮಗ್ರ ನ್ಯೂಸ್‌ : ಹುಳಿಯಾರು ಪಟ್ಟಣದ ಮೂಲಕ ಹಾದು ಹೋಗುವ ಬೀದರ್-ಶ್ರೀರಂಗಪಟ್ಟಣ 150ಎ ಹೆದ್ದಾರಿಯ ಭಾಗವಾಗಿರುವ ಪಟ್ಟಣದಿಂದ ಕೆ.ಬಿ.ಕ್ರಾಸ್‌ ವರಗಿನ ರಸ್ತೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹಲವು ವರ್ಷಗಳ ಬೇಡಿಕೆಯಾಗಿದ್ದ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಕಾಮಗಾರಿಗೆ ಆರಂಭದ ದಿನಗಳಲ್ಲಿ ಇದ್ದ ಸಂತಸ ಈಗಿಲ್ಲ. ಕಾಮಗಾರಿ ಕೊನೆಯ ಹಂತದಲ್ಲಿದ್ದು, ವಾಹನ ಸವಾರರ ಸಂತಸವೀಗ ಅಪಘಾತಗಳ ಸರಮಾಲೆಯ ಕಹಿ ನೆನಪಿನಲ್ಲಿ ಕರಗುತಿದೆ. ರಸ್ತೆಗಿಳಿಯಲು ಸಾರ್ವಜನಿಕರು ಭಯಪಡುವಂತಾಗಿದೆ.

Ad Widget . Ad Widget . Ad Widget .

ಈ ರಸ್ತೆ ಬಳಕೆಗೆ ಸಿದ್ಧವಾದ ದಿನದಿಂದಲೇ ಅಪಘಾತಗಳು ನಡೆಯುತ್ತಿವೆ. ಕಳೆದ ವಾರದಲ್ಲಿ ನಾಲ್ಕೈದು ಅಪಘಾತ ಸಂಭವಿಸಿದ್ದು, ಸಾಲ್ಕಟ್ಟೆ ಕ್ರಾಸ್‌ನಲ್ಲಿ ಶುಕ್ರವಾರ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇದಕ್ಕೆ ನಿಖರ ಕಾರಣಗಳು ಗೋಚರಿಸುತ್ತಿಲ್ಲ.

ರಸ್ತೆ ಇಕ್ಕೆಲಗಳಲ್ಲಿದ್ದ ಮರಗಳನ್ನು ಕಡಿದು ರಸ್ತೆ ವಿಶಾಲವಾಗಿದ್ದರೂ ಅಪಘಾತಗಳು ತಪ್ಪುತ್ತಿಲ್ಲ. ಅಪಘಾತ ವಲಯಗಳಲ್ಲಿ ಸ್ಪಷ್ಟ ಸೂಚನಾ ಫಲಕಗಳು ಕಾಣಿಸುತ್ತಿಲ್ಲ. ಅಪಘಾತ ತಪ್ಪಿಸಲೆಂದು ಅನೇಕ ಕಡೆ ವೇಗ ನಿಯಂತ್ರಕ ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಮುಖ್ಯ ಹೆದ್ದಾರಿಯಿಂದ ಒಂದೇ ಕಡೆ ಎರಡು-ಮೂರು ಕಡೆ ತಿರುವು ರಸ್ತೆಗಳಿದ್ದು ಅಲ್ಲಿ ವೃತ್ತ ನಿರ್ಮಿಸಿಲ್ಲ. ಅಪಘಾತವಾದ ಸ್ಥಳದಲ್ಲಿ ವಿಭಜಕ ಸೇರಿದಂತೆ ಸಣ್ಣ ಪುಟ್ಟ ದುರಸ್ತಿಯನ್ನಷ್ಟೇ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Leave a Comment

Your email address will not be published. Required fields are marked *