Ad Widget .

ವಿಜಯಪುರ: ಬಿಜೆಪಿ ಶಕ್ತಿಕೇಂದ್ರ ಮಟ್ಟದ ಪಥ ಸಭೆಗೆ ನಾಯಕರ ನಿಯೋಜನೆ- ಆರ್.ಎಸ್.ಪಾಟೀಲ್

ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಪರ ಬೂತ್ ಮಟ್ಟದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ಏ.19 ಮತ್ತು 20 ನಿನ್ನೆ ಮತ್ತು ಇಂದು ಎರಡು ದಿನಗಳ ಕಾಲ ವಿಜಯಪುರ ಜಿಲ್ಲೆಯ ಎಲ್ಲಾ ಎಂಟು ಮತಕ್ಷೇತ್ರಗಳ ಒಟ್ಟು 428 ಶಕ್ತಿಕೇಂದ್ರಗಳಿಗೆ ನಾಯಕರುಗಳನ್ನು ಪಕ್ಷದಿಂದ ನಿಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಆರ್.ಎಸ್.ಪಾಟೀಲ್ ಕುಚಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget . Ad Widget .

ಮುದ್ದೇಬಿಹಾಳ ಮತಕ್ಷೇತ್ರದ 52 ಶಕ್ತಿಕೇಂದ್ರಗಳಿಗೆ ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ದೇವರ ಹಿಪ್ಪರಗಿ ಮತಕ್ಷೇತ್ರದ 48 ಶಕ್ತಿಕೇಂದ್ರಗಳಿಗೆ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಬಸನವ ಬಾಗೇವಾಡಿ ಮತಕ್ಷೇತ್ರದ 58 ಶಕ್ತಿಕೇಂದ್ರಗಳಿಗೆ ಮಾಜಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ,

Ad Widget . Ad Widget .

ಬಬಲೇಶ್ವರ ಮತಕ್ಷೇತ್ರದ 48 ಶಕ್ತಿಕೇಂದ್ರಗಳಿಗೆ ಮುಖಂಡ ಸಂಜೀವ ಐಹೊಳೆ, ವಿಜಯಪುರ ನಗರ ಮತಕ್ಷೇತ್ರದ 54 ಶಕ್ತಿಕೇಂದ್ರಗಳಿಗೆ ಮುಖಂಡ ಕಾಸೂಗೌಡ ಬಿರಾದಾರ, ನಾಗಠಾಣ ಮತಕ್ಷೇತ್ರದ 47 ಶಕ್ತಿಕೇಂದ್ರಗಳಿಗೆ ಮಾಜಿ ಶಾಸಕ ರಮೇಶ ಭೂಸನೂರ, ಇಂಡಿ ಮತಕ್ಷೇತ್ರದ 49 ಶಕ್ತಿ ಕೇಂದ್ರಗಳಿಗೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಹಾಗೂ ಸಿಂದಗಿ ಮತಕ್ಷೇತ್ರದ 71 ಶಕ್ತಿಕೇಂದ್ರಗಳಿಗೆ ಮಾಜಿ ಶಾಸಕರಾದ ರಾಜಶೇಖರ ಶೀಲವಂತ ಮತ್ತು ಮುಖಂಡ ವಿಜುಗೌಡ ಎಸ್. ಪಾಟೀಲ್ ಅವರುಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *