ಗುಂಡ್ಲುಪೇಟೆ: ಹುಲಿದಾಳಿಗೆ ಮೃತಪಟ್ಟ ಮೂರು ತಿಂಗಳ ಕಂದನಿಗಾಗಿ ತಾಯಿ ಆನೆ ಚೀರಾಟ

ಸಮಗ್ರ ನ್ಯೂಸ್ : ಕಂದನಿಗಾಗಿ ಗಂಟೆಗಟ್ಟಲೆ ರಸ್ತೆ ಬದಿಯಲ್ಲೇ ನಿಂತು ಮೃತಪಟ್ಟ ಕರುಳ ಬಳ್ಳಿಗಾಗಿ ತಾಯಿಯಾನೆ ಚೀರಾಟ, ಇತ್ತ ಸುಮಾರು 4 ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತ ಈ ಮನಕಲಕುವ ದೃಶ್ಯ ಕಂಡುಬಂದಿದ್ದು ಗುಂಡ್ಲುಪೇಟೆ ತಾಲೂಕಿನ ಪ್ರತಿಷ್ಠಿತ ವನ್ಯಜೀವಿ ತಾಣ ಬಂಡೀಪುರದಲ್ಲಿ ಮರಿಯನ್ನ ಕಳೆದುಕೊಂಡ ತಾಯಿ ಆನೆ ರೋಧನೆಯನ್ನ ಕಣ್ಣಾರೆ ಕಂಡ ಜನರು ಮರುಗಿದ್ದಾರೆ.

Ad Widget ... ..

ಈ ದೃಶ್ಯ ಕಂಡುಬಂದಿದ್ದು ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ, ಮೂರು ತಿಂಗಳ ಮರಿಯಾನೆ ಮೇಲೆ ಎರಗಿದ ಹುಲಿ ಭೀಕರ ದಾಳಿ ನಡೆಸಿದೆ, ಹುಲಿ ದಾಳಿಯ ತೀವ್ರತೆಗೆ ಮರಿಯಾನೆ ಮೃತಪಟ್ಟಿದೆ ಆದರೆ ತಾಯಿ ಆನೆ ತನ್ನ ಮರಿಯನ್ನ ಎಬ್ಬಿಸಲು ಪ್ರಯತ್ನ ಪಡುತ್ತಿರುವ ದೃಶ್ಯ ಮನಕಲಕುವಂತಿದೆ.

Ad Widget

ತನ್ನ ಕರುಳ ಬಳ್ಳಿಯನ್ನ ಕಳೆದುಕೊಂಡ ತಾಯಿ ಆನೆ ರಸ್ತೆಬದಿಯಲ್ಲೇ ನಿಂತು ಮರಿಯನ್ನ ಎಬ್ಬಿಸಲು ಪ್ರಯತ್ನ ಪಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸದ್ಯಕ್ಕೆ ಮೃತಪಟ್ಟಿರುವ ಮರಿಯಾನೆಯನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಿನ ಒಳಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ.

Leave a Comment

Your email address will not be published. Required fields are marked *