Ad Widget .

ಹುಬ್ಬಳ್ಳಿ : ಮುಸ್ಲಿಂಮರು ಒಂದಲ್ಲ, ಎರಡಲ್ಲ, 5 ಮದುವೆ ಮಾಡಿಕೊಳ್ಳಿ: ನಟ ಪ್ರಥಮ್

ಸಮಗ್ರ ನ್ಯೂಸ್ : ಯುವತಿ ನೇಹಾ ಹಿರೇಮಠ ಅವರ ಮನೆಗೆ ಕನ್ನಡ ಚಿತ್ರರಂಗದ ನಟ ಪ್ರಥಮ್ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಹಿಂದೂ ಹುಡುಗಿಯರ ಜೊತೆ ನೀವು ಲವ್ ಯಾಕೆ ಮಾಡುತ್ತೀರಿ? ನಿಮ್ಮ ಪಾಡಿಗೆ, ನಿಮ್ಮ ಸಮುದಾಯದಲ್ಲೇ ಬೇಕಾದರೆ ಒಂದಲ್ಲ ಎರಡಲ್ಲ 5 ಮದುವೆ ಮಾಡಿಕೊಳ್ಳಿ. ನಿಮ್ಮನ್ನು ಯಾರು ಕೇಳ್ತಾರೆ? ಹಿಂದೂಗಳ ತಂಟೆಗೆ ಬರಬೇಡಿ ಎಂದು ಮುಸ್ಲಿಂಮರಿಗೆ ಎಚ್ಚರಿಕೆ ನೀಡಿದರು.

Ad Widget . Ad Widget .

ಕಲಾವಿದರು ಎಲೆಕ್ಷನ್ ಪ್ರಚಾರಕ್ಕೆ ಬರುತ್ತಾರೆ. ಇಂಥ ಘಟನೆ ಆದಾಗ ಯಾರೂ ಬರಲ್ಲ. ಅಂಥ ಕಲಾವಿದರನ್ನು ತಲೆ ಮೇಲೆ ಇಟ್ಟುಕೊಂಡು ಮೆರೆಸಬೇಡಿ. ನೇಹಾ ಹಿರೇಮಠ್ ನಿಧನದಿಂದ ಚಿತ್ರರಂಗದ ಎಲ್ಲರಿಗೂ ನೋವಾಗಿದೆ ಎಂದು ಪ್ರಥಮ್ ಹೇಳಿದ್ದಾರೆ.

Ad Widget . Ad Widget .

ನನಗೆ ಈ ವಿಷಯದಿಂದ ತುಂಬ ನೋವಾಗಿದೆ. ಅದಕ್ಕಾಗಿಯೇ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ. ಕಡೆಗಣಿಸಿದರೆ ಪ್ರಾಣ ತೆಗೆದುಬಿಡೋದಾ? ನನ್ನ ಮಗ ಅಂಥವನಲ್ಲ ಎಂದು ಅವರ ತಾಯಿ ಹೇಳ್ತಾರೆ. ವೀರಪ್ಪ ನಾಯಕ ಸಿನಿಮಾದ ಕಥೆ ರೀತಿ ಹೇಳಿಕೆ ನೀಡ್ತಾರೆ. 20 ವರ್ಷದ ಹಿಂದೆ ಇವರು ಸಿಕ್ಕಿದ್ದಿದ್ರೆ ನಿರ್ದೇಶಕರು ಶ್ರುತಿ ಬದಲಿಗೆ ಇವರನ್ನೇ ಆಯ್ಕೆ ಮಾಡುತ್ತಿದ್ದರು ಎಂದು ಪ್ರಥಮ್ ಪ್ರತಿಕ್ರಿಯಿಸಿದರು.

ಈ ವಿಚಾರದಲ್ಲಿ ರಾಜಕೀಯ ಬೇಡ. ಸಿನಿಮಾದ ಪ್ರಚಾರಕ್ಕೆ ಈ ಊರಿಗೆ ಬರಬೇಕು ಎಂದುಕೊಂಡಿದ್ದೆ. ಆದರೆ ಈಗ ಸಾವಿನ ಮನೆಗೆ ಬರುವಂತೆ ಆಗಿದೆ’ ಎಂದು ಪ್ರಥಮ್ ಹೇಳಿದ್ದಾರೆ.

Leave a Comment

Your email address will not be published. Required fields are marked *