ಚಿಕ್ಕಮಗಳೂರು : ಕಾವಿ ಧರಿಸಿ ಮನೆಗೆ ಬಂದ ವ್ಯಕ್ತಿಯಿಂದ ಚಿನ್ನಾಭರಣ ಕಳವು

ಸಮಗ್ರ ನ್ಯೂಸ್‌ : ಸಾಧು ಸಂತರಂತೆ ಕಾವಿ ಧರಿಸಿ ಮನೆಯೊಂದಕ್ಕೆ ಬಂದು ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ತರೀಕೆರೆಯಲ್ಲಿ ನಡೆದಿದೆ.

Ad Widget ... ..

ನಾಲ್ವರು ಕಾವಿಧಾರಿಗಳು ಮಹಿಳೆಯ ಮನೆಗೆ ಬಂದಿದ್ದು, ಬಳಿಕ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯ ಎಚ್ಚರ ತಪ್ಪಿಸಿ, ಮಹಿಳೆ ಧರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

Ad Widget

ಮಹಿಳೆಗೆ ಎಚ್ಚರವಾದ ಮೇಲೆ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ವೇಳೆ ಮಹಿಳೆ ನೆರೆಹೊರೆಯವರಿಗೆ ನಡೆದ ಘಟನೆ ತಿಳಿಸಿದ್ದಾರೆ.

ಕಳ್ಳರನ್ನು ಹುಡುಕಿ ಹೋದ ಜನ, ರಸ್ತೆಯಲ್ಲಿ ಹೋಗುತ್ತಿದ್ದ ಅಮಾಯಕ ಬುಡುಬುಡುಕೆ ಕಾವಿಧಾರಿ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ಆತ ತಪ್ಪಿತಸ್ಥನಲ್ಲ ಎಂಬುದು ತಿಳಿದು ಬಂದಿದೆ.

ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತಾಲೂಕಿನಲ್ಲಿ ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

Leave a Comment

Your email address will not be published. Required fields are marked *