Ad Widget .

ಕಬಾಬ್ ಕದ್ದು ಸಿಕ್ಕಿ ಬಿದ್ದ ಕಳ್ಳಿ : ವಿಡಿಯೋ ವೈರಲ್‌

ಸಮಗ್ರ ನ್ಯೂಸ್‌ : ಪಾಕಿಸ್ತಾನಿ ಯುವತಿಯೊಬ್ಬಳು ಅಂಗಡಿಯೊಂದರಲ್ಲಿ ಕಬಾಬ್ ಕದ್ದು ಸಿಕ್ಕಿಬಿದ್ದಿರುವ ಘಟನೆ ಲಂಡನ್ ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

“ಲಂಡನ್ ನಲ್ಲಿ ಪಾಕಿಸ್ತಾನಿ ಮೂಲದ ಹುಡುಗಿಯೊಬ್ಬಳು ಅಂಗಡಿಯಿಂದ ಕಬಾಬ್ ಕದ್ದು ಸಿಕ್ಕಿಬಿದ್ದಿದ್ದಾಳೆ. ಆಕೆ ಇನ್ನೊಂದು ಅಂಗಡಿ ಪ್ರವೇಶಿಸಿದಾಗ, ಅಂಗಡಿ ಮಾಲೀಕರು ಆಕೆಯನ್ನು ಕೂಡಿ ಹಾಕಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

Ad Widget . Ad Widget .

ವೈರಲ್ ವಿಡಿಯೋದಲ್ಲಿ ಲಂಡನ್ ನಲ್ಲಿ ಪಾಕಿಸ್ತಾನ ಮೂಲದ ಯುವತಿಯೊಬ್ಬಳು ಅಂಗಡಿಯೊದರಿಂದ ಕಬಾಬ್ ಕದ್ದು ಓಡಿ ಹೋಗಿ ಇನ್ನೊಂದು ಅಂಗಡಿಯನ್ನು ಪ್ರವೇಶಿಸುತ್ತಾಳೆ. ಆಕೆಯ ನಡೆಯನ್ನು ಕಂಡು ಅನುಮಾನಗೊಂಡ ಅಂಗಡಿ ಮಾಲೀಕರು ಆಕೆಯನ್ನು ಅಂಗಡಿಯಲ್ಲಿಯೇ ಕೂಡಿ ಹಾಕಿದ್ದಾರೆ. ನಂತರ ಆಕೆ ಬಾಗಿಲು ತೆರೆಯುವಂತೆ ಹೈ ಡ್ರಾಮವನ್ನೇ ಸೃಷ್ಟಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ʼಕಳ್ಳತನ ಅವರ ರಕ್ತದಲ್ಲಿಯೇ ಇದೆʼ ಎಂದು ವಿಡಿಯೋ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *