Ad Widget .

ಹುಬ್ಬಳ್ಳಿ : ಜೋಶಿ ಸಾಹೇಬ್ರೆ ನೀವು ಭಕ್ತ ಪ್ರಹ್ಲಾದ್ ಆಗಬಾರದು ಉಗ್ರ ನರಸಿಂಹ ತರ ಆಗಬೇಕು – ನಟ ಪ್ರಥಮ

ಸಮಗ್ರ ನ್ಯೂಸ್‌ : ಹುಬ್ಬಳಿಗೆ ಸಿನಿಮಾ ಪ್ರಚಾರಕ್ಕೆ ಬರ್ತಿದ್ವಿ ಆದ್ರೆ ಇಂತಹ ಸಾವಿಗೆ ಬರೋ ಪರಿಸ್ಥಿತಿ ಬಂದಿದೆ. ಇದ್ರಿಂದ ತುಂಬಾ ನೋವಾಗ್ತಿದೆ. ಇಡೀ ದೇಶವೇ ದುಃಖ ಪಡುವಂತಾಗಿದೆ. ಈ ಭಾಗದ ಎಂಪಿ ಪ್ರಹ್ಲಾದ್ ಜೋಶಿ ಸಾಹೇಬ್ರೆ ನೀವು ಭಕ್ತ ಪ್ರಹ್ಲಾದ್ ಆಗಬಾರದು ಉಗ್ರ ನರಸಿಂಹ ತರ ಆಗಬೇಕು ಇಲ್ಲವಾದ್ರೆ ಹಿರಣ್ಯ ಕಷ್ಯಪ್ಪ ತರ ಬಲಿಯಾಗಿ ಬಿಡ್ತೇವಿ ಎಂದು ಬಿಗ್ ಬಾಸ್ ವಿನ್ನರ್ ನಟ ಪ್ರಥಮ ಹೇಳಿದರು.

Ad Widget . Ad Widget .

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ವರ್ಷ ಅಧಿಕಾರದಲ್ಲಿದ್ದೀರಿ ಸಾಧ್ಯವಾದರೆ ಒಂದು ಕಠಿಣ ಕಾನೂನು ತರಬೇಕಾಗಿದೆ. ರಾಜಕೀಯ ನಾಯಕರು ನೀವು ಹೇಳೋ ಹೇಳಿಕೆ ನೇಹಾ ಕುಟುಂಬಕ್ಕೆ ತುಂಬಾ ನೋವು ಉಂಟು ಮಾಡುತ್ತಿದೆ. ಫಾಸ್ಟ್ ಟ್ರಾಕ್ ಕೋರ್ಟ್ ಈ ಕೇಸ್ ಬರಬೇಕು ಬೇಗನೇ ಆರೋಪಿಗೆ ಶಿಕ್ಷೆಯಾಗಬೇಕು. ಅಂದಾಗ ಮಾತ್ರ ನೇಹಾ ಕುಟುಂಬಕ್ಕೆ ನ್ಯಾಯ ಸಿಗುತ್ತೆ. ಫೈಯಾಜ್ ಮಾಡಿದ್ದು ಅಚಾನಕ್ ಕೃತ್ಯವಲ್ಲ, ಬಲವಂತವಾಗಿ ಬಂದು ಒಂಬತ್ತು ಬಾರಿ ಚಾಕು ಇರಿದ್ದಿದ್ದಾನೆ ಎಂದರು.

Ad Widget . Ad Widget .

ಫೈಯಾಜ್ ತಾಯಿ ಹೇಳ್ತಾರೆ ನನ್ನ ಮಗ ಅಂತವನಲ್ಲಾ ಅಂತ. ನೀವು ಒಬ್ಬರು ಶಿಕ್ಷಕರಾಗಿ ನಿಮ್ಮ ಮಗನಿಗೆ ಹೇಳಿಕೊಟ್ಟಿದ್ದು ಇದೇನಾ? ಫೈಯಾಜ್ ಪೋಷಕರು ಮೇಲೆ ಆಕ್ರೋಶ ವ್ಯಕ್ತಪಡಿಸಿದ ನಟ ಪ್ರಥಮ. ಮುಸ್ಲಿಂ ಸಮುದಾಯದವರು ಇಂತಹ ಅಯೋಗ್ಯರನ್ನ ಮಟ್ಟಹಾಕುವ ಕೆಲಸ ಮಾಡಬೇಕು. ಯಾರು ಅವನ ಪರ ವಕಾಲತ್ತು ವಹಿಸಿಕೊಳ್ಳಬಾರದು. ನಿಮ್ಮ ಧರ್ಮದಲ್ಲಿ ಮದುವೆಯಾಗಿ ಖುಷಿಯಾಗಿರಿ. ನಿಮಗ್ಯಾಕೇ ಹಿಂದೂಗಳ ಸಹವಾಸಬೇಕು.?ನಿಮ್ಮ ಸಮುದಾಯದಲ್ಲಿ ಹತ್ತು ಮದುವೆಯಾಗಿ ನಿಮ್ಮನ್ನ ಯಾರು ಕೇಳ್ತಾರೆ. ನಮ್ಮ ಹಿಂದೂಗಳ ತಂಟೆಗೆ ಬರಬೇಡಿ ಇದು ಸರಿ ಇರೋದಿಲ್ಲಾ ಎಂದರು.

Leave a Comment

Your email address will not be published. Required fields are marked *