Ad Widget .

ಉಡುಪಿ : ಬಿಜೆಪಿ ಬೆಂಬಲಿಸಿದರೆ ಜನರಿಗೆ ಚೆಂಬೇ ಗತಿ- ರಮೇಶ್ ಕಾಂಚನ್ ಟೀಕೆ

ಸಮಗ್ರ ನ್ಯೂಸ್‌ : ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಡುಪಿ ಕಾಂಗ್ರೆಸ್ ಭವನದ ಎದುರು ಇಂದು ಚೆಂಬು ಹಿಡಿದುಕೊಂಡು ಪ್ರತಿಭಟನೆ ನಡೆಸಲಾಯಿತು.

Ad Widget . Ad Widget .

ಆ ಮೂಲಕ ಲೋಕಸಭಾ ಚುನಾವಣೆಯ ಪ್ರಚಾರವನ್ನು ಕೈಗೊಳ್ಳಲಾಯಿತು. ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ವಿಭಿನ್ನ ರೀತಿಯಲ್ಲಿ ಅಭಿಯಾನವನ್ನು ಕಾಂಗ್ರೆಸ್ ಕಾರ್ಯಕರ್ತರು ನಡೆಸಿದರು. ಉಡುಪಿ ಬ್ಲಾಕ್ ನ 133 ಬೂತ್ ಗಳಲ್ಲಿ ಕೂಡ ಪ್ರಚಾರಕ್ಕೆ ಹೋಗುವ ಕಾರ್ಯಕರ್ತರು ಈ ವಿಭಿನ್ನ ಅಭಿಯಾನದ ಮೂಲಕ ಮತಪ್ರಚಾರ ಮಾಡಿದರು.

Ad Widget . Ad Widget .

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಕೂಡ ಬಿಜೆಪಿಯ ಸಂಸದರ ಕೇಂದ್ರದ ಮುಂದೆ ಬಾಯಿ ಬಿಚ್ಚುತ್ತಿಲ್ಲ. ದೇಶದಲ್ಲಿಯೇ ಅತೀ ಹೆಚ್ಚು ತೆರಿಗೆ ಸಂಗ್ರಹ ಮಾಡುವ ರಾಜ್ಯ ಕರ್ನಾಟಕ.

ಆದರೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ನೀಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಕೂಡ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ನೀಡದೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ. ಕೇಂದ್ರದ ಬಿಜೆಪಿ ಸರಕಾರ ನೀಡಿದ ಯಾವುದೇ ಭರವಸೆಗಳು ಈವರೆಗೆ ಈಡೇರಿಲ್ಲ. ಈ ಬಾರಿ ಮತ್ತೆ ದೇಶದ ಮತದಾರರು ಬಿಜೆಪಿಯನ್ನು ಬೆಂಬಲಿಸಿದರೆ ಮುಂದೆ ಪ್ರತಿಯೊಬ್ಬರಿಗೂ ಚೊಂಬೇ ಗತಿಯಾಗಲಿದೆ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಮುಖಂಡರಾದ ನಾಗೇಶ್ ಉದ್ಯಾವರ, ಮಹಾಬಲ ಕುಂದರ್, ಆನಂದ ಪೂಜಾರಿ, ಸತೀಶ್ ಮಂಚಿ, ಸದಾಶಿವ ಪೂಜಾರಿ ಕಟ್ಟೆಗುಡ್ಡೆ ಸಂಧ್ಯಾ ತಿಲಕರಾಜ್, ಅರ್ಚನಾ, ನರಸಿಂಹ ಮೂರ್ತಿ, ರಾಜೇಶ್ ನಾಯಕ್, ಶರತ್ ಶೆಟ್ಟಿ, ಸತೀಶ್ ಪುತ್ರನ್, ಭರತ್, ಪ್ರಮೀಳಾ ಸುವರ್ಣ ಉಪಸ್ಥಿತರಿದ್ದರು

Leave a Comment

Your email address will not be published. Required fields are marked *