ಧಾರವಾಡ: ಜಿಲ್ಲಾ ಸ್ವೀಪ್ ಸಮಿತಿಯಿಂದ ವಿಶೇಷ ಚೇತನರ ಬೈಕ್ ರ್ಯಾಲಿ

ಸಮಗ್ರ ನ್ಯೂಸ್ : ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯಿಂದ ವಿಶೇಷ ಚೇತನರ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿತ್ತು.

Ad Widget ... ..

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಸ್ವರೂಪ ಟಿ.ಕೆ. ಅವರು ವಿಶೇಷ ಚೇತನರ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.

Ad Widget

ಈ ರ್ಯಾಲಿಯು ಕೆ.ಸಿ.ಡಿ ವೃತ್ತದಿಂದ ಪ್ರಾರಂಭವಾಗಿ ಸಪ್ತಾಪೂರ ಬಾವಿ, ಜಯನಗರ ಕ್ರಾಸ್, ಕೆ.ಯು.ಡಿ ವೃತ್ತ, ಶ್ರೀನಗರ ವೃತ್ತ ಮಾರ್ಗದ ಮೂಲಕ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತ್ತು.

ಮೇ 7 ರಂದು ತಪ್ಪದೇ ಎಲ್ಲರು ಮತದಾನ ಮಾಡಿ. ಮತದಾನ ನಮ್ಮೆಲ್ಲರ ಹಕ್ಕು, ತಪ್ಪದೇ ಮತದಾನ ಮಾಡೋಣ ಎಂದು ಅವರು ತಿಳಿಸಿದರು.ಜಿಲ್ಲಾ ಪಂಚಾಯತ ಯೋಜನಾಧಿಕಾರಿ ದೀಪಕ ಮಡಿವಾಳರ, ಇನ್ನೀತರ ಅಧಿಕಾರಿಗಳು, ವಿಶೇಷ ಚೇತನರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *