ಬೀದರ್ ಜಿಲ್ಲೆಯಲ್ಲಿ ಗುಡುಗು, ಮಿಂಚು‌ ಸಹಿತ ಮಳೆ

ಸಮಗ್ರ ನ್ಯೂಸ್‌ : ಬೀದರ್ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿಯಿಡೀ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಶನಿವಾರ ನಸುಕಿನ ಜಾವದಿಂದ ಬೆಳಗಿನ ತನಕ ವರ್ಷಧಾರೆಯಾಗಿದೆ.

Ad Widget ... ..

ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡಿದೆ. ಶನಿವಾರ ತಾಪಮಾನ ತಗ್ಗಿದೆ. ಆದರೆ, ದಿನವಿಡೀ ಕಾರ್ಮೋಡ ಕವಿದು, ತೀವ್ರ ಸೆಕೆಯಿದ್ದ ಕಾರಣ ಜನರು ತೀವ್ರ ಪರದಾಡಿದರು.

Ad Widget

ಬೀದರ್ ತಾಲ್ಲೂಕಿನ ಜನವಾಡ, ಮರಕಲ್, ಅಲಿಯಂಬರ್, ಚಿಟ್ಟಾ, ಅಮಲಾಪುರ, ಗೋರನಳ್ಳಿ, ಗುನ್ನಳ್ಳಿ, ಶಹಾಪುರ, ಔರಾದ್ ತಾಲ್ಲೂಕಿನ ಚಿಂತಾಕಿ, ವಡಗಾಂವ್, ಭಾಲ್ಕಿ, ಹುಮನಾಬಾದ್, ಹುಲಸೂರ ತಾಲ್ಲೂಕಿನ ಕೆಲವೆಡೆ ಮಳೆಯಾಗಿದೆ.

Leave a Comment

Your email address will not be published. Required fields are marked *