Ad Widget .

ಬೆಂಗಳೂರಿನಲ್ಲಿ ಪ್ರಧಾನಿ ಮೋದಿಗೆ ಭದ್ರತಾ ಲೋಪ|ರಸ್ತೆಗಿಳಿದು ಚೊಂಬು ಪ್ರದರ್ಶಿಸಿದ ನಲಪಾಡ್

ಸಮಗ್ರ ನ್ಯೂಸ್: ಲೋಕ ಚುನಾವಣೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಅದರಂತೆ ಬೆಂಗಳೂರಿನ ಮೇಖ್ರಿ ಸರ್ಕಲ್​ ಬಳಿಯ HQTCಯಿಂದ ತೆರಳುತ್ತಿದ್ದ ವೇಳೆ ಭದ್ರತಾ ಲೋಪ ಉಂಟಾಗಿದೆ.

Ad Widget . Ad Widget .

ಹೌದು ಮೋದಿಯವರು ಅರಮನೆ ಮೈದಾನಕ್ಕೆ ತೆರಳುವಾಗ ರಸ್ತೆಗೆ ನುಗ್ಗಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಚೊಂಬು ಪ್ರದರ್ಶಿಸಿದ್ದಾರೆ. ಕೂಡಲೇ ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

Ad Widget . Ad Widget .

ನಂಬರ್ ಪ್ಲೇಟ್ ಇಲ್ಲದ ಡಿಫೆಂಡರ್ ಕಾರಿನಲ್ಲಿ ಬಂದ ನಲಪಾಡ್ ಮೋದಿ ವಿರುದ್ಧ ಚೊಂಬು ಪ್ರದರ್ಶಿಸಲು ಮುಂದಾಗಿದ್ದಾರೆ. ನಲಪಾಡ್ ನನ್ನು ವಶಕ್ಕೆ ಪಡೆದ ನಂತರ ಪೊಲೀಸರ ಮೇಲೆ ನಲಪಾಡ್ ಆಕ್ರೋಶ ವ್ಯಕ್ತಪಡಿಸಿದರು. ನಾನು ಚೊಂಬು ತೋರಿಸಿದರೆ ನಿಮಗೇನು ಸಮಸ್ಯೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *