ಸಮಗ್ರ ನ್ಯೂಸ್: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಸಂತೆಮೈದಾನದಲ್ಲಿ ನಿನ್ನೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಮಾವೇಶ ಮಾಡಲಾಗಿತ್ತು. ಸಮಾವೇಶ ಮುಗಿಯುತ್ತಿದ್ದಂತೆ ಎಣ್ಣೆ ಏಟಿನಲ್ಲಿದ್ದ ಕಾರ್ಯಕರ್ತರು ವೇದಿಕೆ ಮೇಲೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಬಿಜೆಪಿ-ಜೆಡಿಎಸ್ ಬಾವುಟ ಹಿಡಿದು ಡಿಜೆ ಸಾಂಗ್ಗೆ ಕಾರ್ಯಕರ್ತರು ಲುಂಗಿ ಡಾನ್ಸ್ ಮಾಡಿದ್ದಾರೆ. ಎಣ್ಣೆ ಏಟಿಗೆ ಡ್ಯಾನ್ಸ್ ಮಾಡುವಾಗ ಲುಂಗಿ ಬಿಚ್ಚಿಬಿದ್ದರೂ ಪರಿವೇ ಇಲ್ಲದೇ ಕಾರ್ಯಕರ್ತರು ಕುಣಿದಿದ್ದಾರೆ. ಮೈತ್ರಿ ಅಭ್ಯರ್ಥಿ ಪರ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೋಮಣ್ಣ ಪರ ಮತಯಾಚನೆ ಮಾಡಿದ್ದಾರೆ.
