ಸಮಗ್ರ ನ್ಯೂಸ್ : ಮಳೆಗಾಗಿ ಕಾಯುತ್ತಿದ್ದ ಮೈಸೂರಿಗೆ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದ್ದು ಈ ಬಾರಿ ಮೈಸೂರು ಸೇರಿದಂತೆ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಬೀಳಲಿದ್ದು ಮೈಸೂರಿನಲ್ಲಿ ವರ್ಷಕ್ಕೆ 873 ಮಿಲಿ ಮೀಟರ್ ಮಳೆಯಾಗುತ್ತಿತ್ತು. ಕಳೆದ 30 ವರ್ಷದ ಸರಾಸರಿ ಮಳೆಯ ಪ್ರಮಾಣ ದಾಖಲಿಸಿ, ವರ್ಷಕ್ಕೆ ಮೈಸೂರಿನಲ್ಲಿ 820 ಮಿಲಿ ಮೀಟರ್ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಲಾಗಿತ್ತು.
ವಾಡಿಕೆಗಿಂತ ಹೆಚ್ಚು ಮಳೆ
ಆದರೆ ಕಳೆದ ವರ್ಷ ಅಂದರೆ 2023ರಲ್ಲಿ ಮೈಸೂರಿನಲ್ಲಿ ವಾಡಿಕೆಗಿಂತ ಶೇಕಡ 20ರಷ್ಟು ಮಳೆ ಕಡಿಮೆಯಾಗಿತ್ತು. ಆದರೆ ಈ ಬಾರಿ ಮೈಸೂರಿಗೆ 870 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳು ಇದೆ ಎಂದು ಹವಾಮಾನ ಇಲಾಖೆಯ ಸಹ ಸಂಶೋಧಕ ಡಾಕ್ಟರ್ ಜಿ. ಸುಮಂತ್ ಕುಮಾರ್ ತಿಳಿಸಿದ್ದಾರೆ.
ಇದರ ಜೊತೆಗೆ ಸುಮಾರು ಮುಂದಿನ 3, 4 ದಿನಗಳಲ್ಲಿ ಮೈಸೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.