Ad Widget .

ಮಂಡ್ಯ: ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌| ಸಾಲಗಾರರ ಕಾಟಕ್ಕೆ ಹೆಂಡತಿ ಮಕ್ಕಳಿಗೆ ವಿಷ ಕೊಟ್ಟು ತಾನು ಆತ್ಮಹತ್ಯೆ

ಸಮಗ್ರ ನ್ಯೂಸ್‌ : ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿಯೊಬ್ಬ ಸಾಲಗಾರರ ಕಾಟಕ್ಕೆ ಬೇಸತ್ತು, ಹೆಂಡತಿ, ಮಕ್ಕಳಿಗೆ ವಿಷ ನೀಡಿ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ.

Ad Widget . Ad Widget .

ನರಸಿಂಹ ಎಂಬಾತ ಈ ಕೃತ್ಯವೆಸಗಿದ್ದಾನೆ. ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ದೀಪಿಕಾ (1) ಮೃತ ದುರ್ದೈವಿ. ಅಸ್ವಸ್ಥನಾಗಿರುವ ನರಸಿಂಹನನ್ನು ನಾಗಮಂಗಲ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Ad Widget . Ad Widget .

ಐಪಿಎಲ್ ಕ್ರಿಕೆಟ್‌ ನೋಡುತ್ತಿದ್ದ ನರಸಿಂಹ ಬೆಟ್ಟಂಗ್‌ನ ಹಿಂದೆ ಬಿದ್ದಿದ್ದನು. ಇದರಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಇದರಿಂದ ಮನನೊಂದ ನರಸಿಂಹ ಪತ್ನಿ ಹಾಗೂ ಪುಟ್ಟ ಮಕ್ಕಳಿಬ್ಬರಿಗೆ ವಿಷ ನೀಡಿ ಹತ್ಯೆ ಮಾಡಿದ್ದಾನೆ. ಅವರೆಲ್ಲೂ ಮೃತಪಟ್ಟ ಬಳಿಕ ತಾನೂ ವಿಷ ಸೇವಿಸಿದ್ದಾನೆ. ಪ್ರಕರಣ ನಾಗಮಂಗಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

Leave a Comment

Your email address will not be published. Required fields are marked *