ಸಮಗ್ರ ನ್ಯೂಸ್: ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಐಕ್ಯುಎಸಿ ಹಾಗೂ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗ ಇದರ ವತಿಯಿಂದ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ ರಿಸರ್ಚ್ ಇನ್ಸ್ಟಿಟ್ಯೂಟ್ ಇಲ್ಲಿಗೆ ಅಧ್ಯಯನ ಭೇಟಿಯನ್ನು ಎ. 19ರಂದು ಪ್ರಥಮ ಪದವಿಯ ಬಿಕಾಂ ಹಾಗೂ ಬಿಬಿಎ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಅಧ್ಯಯನ ಭೇಟಿಯ ಸಂದರ್ಭದಲ್ಲಿ ಸಿಪಿಸಿ ಆರ್ಐ ಇದರ ಟೆಕ್ನಿಕಲ್ ಸ್ಟಾಫ್ ಆದ ಡಾ|ಕಮಲ್ ಇವರು ವಿದ್ಯಾರ್ಥಿಗಳಿಗೆ ಸಂಸ್ಥೆಯ ಬಗ್ಗೆ ಹಾಗೂ ಅಲ್ಲಿ ಲಭ್ಯವಿರುವಂತಹ ವಿವಿಧ ತಳಿಗಳ ತೆಂಗಿನ ಮರಗಳು ಗಿಡಗಳು, ಅಡಕೆ ಗಿಡಗಳು, ಮೀನುಗಾರಿಕೆ ಹಾಗೂ ಪ್ರಸ್ತುತ ಕೃಷಿಕರು ಎದುರಿಸುತ್ತಿರುವಂತಹ ಸಮಸ್ಯೆಗಳು ಮತ್ತು ಪರಿಹಾರಗಳು ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಪುಷ್ಪಾ ಡಿ., ಪ್ರಮೀಳಾ ಎನ್ ಹಾಗೂ ಅಶ್ವಿನಿ ಎಸ್.ಎನ್. ಇವರು ಉಪಸ್ಥಿತರಿದ್ದರು.