ಸಮಗ್ರ ನ್ಯೂಸ್: ದೇಶದಲ್ಲಿ ಬಿಸಿಲ ತಾಪ ಏರುತ್ತಿದ್ದರೂ, ಇತ್ತ ಈ ಬಿಸಿನಲ್ಲೇ ನಿಂತು ಪೊಲೀಸರು ಕರ್ತವ್ಯ ನಿಭಾಯಿಸುವುದು ಅನಿವಾರ್ಯ. ಇದನ್ನು ಅರಿತ ಗುಜರಾತ್ ಪೊಲೀಸರು ಬಿರು ಬಿಸಿನಲ್ಲೂ ನಿಂತು ಕರ್ತವ್ಯ ನಿಭಾಯಿಸುವ ಪೊಲೀಸರಿಗೆ ಎಸಿ ಹೆಲ್ಮೆಟ್ ನೀಡುತ್ತಿದ್ದಾರೆ. ಈ ಹೆಲ್ಮೆಟ್ ಎಷ್ಟೇ ಬಿಸಿಲಿನಲ್ಲಿ ನಿಂತರೂ ಪೊಲೀಸರ ತಲೆಯನ್ನು ಕೂಲ್ ಕೂಲ್ ಮಾಡಲಿದೆ. ವಡೋದರದಲ್ಲಿ ಬಿಸಿಲಿನ ತಾಪಮಾನ 40 ರಿಂದ 42 ಡಿಗ್ರಿ ದಾಖಲಾಗಿದೆ. ಹೀಗಾಗಿ ಗುಜರಾತ್ ವಡೋದರ ಟ್ರಾಫಿಕ್ ಪೊಲೀಸರಿಗೆ ಈ ಎಸಿ ಹೆಲ್ಕೆಟ್ ನೀಡಲಾಗಿದೆ.
ಈ ಅತ್ಯಾಧುನಿಕ ಹೆಲ್ಮಟ್ ಒಂದು ಬಾರಿ ಚಾರ್ಜ್ ಮಾಡಿದರೆ ಸತತ 8 ಗಂಟೆಗಳ ಕಾಲ ತಂಪು ನೀಡಲಿದೆ. ಮುಖಕ್ಕೆ ಬಿಸಿಲು ತಾಗದಂತೆ ಶೀಲ್ಡ್, ಚಾಜಿರ್ಂಗ್ ಪಾಯಿಂಟ್ ಸೇರಿದಂತೆ ಅತ್ಯಂತ ಸೂಕ್ಷ್ಮವಾಗಿ ಈ ಹೆಲ್ಮಟ್ ವಿನ್ಯಾಸ ಮಾಡಲಾಗಿದೆ. ಈ ಹೆಲ್ಮೆಟ್ ಧರಿಸುವುದರಿಂದ ಪೊಲೀಸರು ಬಿರು ಬಿಸಿಲಿನಲ್ಲೂ ಕೂಲ್ ಕೂಲ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ.
ಸದ್ಯ ವಡೋದರ ಪೊಲೀಸರಿಗೆ ಪ್ರಯೋಗಾತ್ಮಕವಾಗಿ ಈ ಹೆಲ್ಮೆಟ್ ನೀಡಲಾಗಿದೆ. ಇದೀಗ ವಡೋದರ ಪೊಲೀಸರು ಈ ಎಸಿ ಹೆಲ್ಮಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರೆ. ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಇದೆ ಎಸಿ ಹೆಲ್ಕೆಟ್ ಹಾಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹೆಲ್ಕೆಟ್‍ನಿಂದ ಪೊಲೀಸರು ಬಿಸಿಲಿನಲ್ಲೂ ಕೂಲ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ ಎನ್ನುತ್ತಿದ್ದಾರೆ. ಪ್ರಾಯೋಗಿಕ ಹಂತದಲ್ಲಿರುವ ಈ ಹೆಲೈಟ್‍ನ್ನು ವಡೋದರ ಟ್ರಾಫಿಕ್ ಪೊಲೀಸರು ಬಳಸಿ ಮೆಚ್ಚುಗೆ ಸೂಚಿಸಿದ್ದಾರೆ.
ಪೊಲೀಸರ ಎಸಿ ಹೆಲ್ಮಟ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲೂ ಭಾರಿ ಚರ್ಚೆಯಾಗುತ್ತಿದೆ. ಬಿಸಿಲಿನ ಬೇಗೆ ತಡೆಯಲು ಇದು ಅತ್ಯುತ್ತಮ ಹೆಲೈಟ್. ಈ ಹೆಲ್ಮಟ್ ಪೊಲೀಸರು ಹಾಗೂ ಬಿಸಿಲಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ನೆರವಾಗಲಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.