ಕೊನೆಗೂ ಕರುಣೆ ತೋರಿದ ವರುಣ| ಸುಳ್ಯ, ಕಡಬ ತಾಲೂಕಿನಾದ್ಯಂತ ಗುಡುಗು ಸಹಿತ‌ ಭಾರೀ ಮಳೆ

ಸಮಗ್ರ ನ್ಯೂಸ್: ಬಿಸಿಲಿನಿಂದ ಬಸವಳಿದಿದ್ದ ಕರಾವಳಿಗೆ ಕೊನೆಗೂ ವರುಣ ಕೃಪೆ ತೋರಿದ್ದಾನೆ. ಗುರುವಾರ ಹಾಗೂ ಶುಕ್ರವಾರ ಕಡಬ, ಸುಳ್ಯ ತಾಲೂಕಿನ ಹಲವೆಡೆ‌ ಮತ್ತು ಬೆಳ್ತಂಗಡಿ, ಪುತ್ತೂರು ತಾಲೂಕಿನ ಕೆಲವು ಕಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

Ad Widget ... ..

ಕಡಬ ತಾಲೂಕಿನ ಮರ್ಧಾಳ , ಬಿಳಿನೆಲೆ, ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ತಾಲೂಕಿನ ಬಹುತೇಕ‌ ಭಾಗಗಳಲ್ಲಿ ಸಂಜೆಯಿಂದ ಭಾರೀ ಮಳೆಯಾಗಿದೆ. ಕೆಲವು ಕಡೆ ಕಾರ್ಯಕ್ರಮಗಳಿಗೆ ಮಳೆಯಿಂದ ತೊಂದರೆಯಾಗಿದ್ದರೂ, ಜನ ಮಳೆಯಿಂದ ಸಂತಸಗೊಂಡಿದ್ದಾರೆ.

Ad Widget

ಮಳೆ ಇನ್ನೆರಡು‌ ದಿನವೂ ಮುಂದುವರಿಯುವ ಮುನ್ಸೂಚನೆ ನೀಡಲಾಗಿದ್ದು, ಕೊಂಚ ಮಟ್ಟಿಗೆ ವಾತಾವರಣ ಕೂಲ್ ಆಗಿದೆ.

Leave a Comment

Your email address will not be published. Required fields are marked *