Ad Widget .

ಉಡುಪಿ : ಯಾರ ಪ್ರಚಾರ ಮಾಡಬೇಕು ಅನ್ನೋದು ದರ್ಶನ್ ಗೆ ಬಿಟ್ಟ ವಿಚಾರ- ಸುಮಲತಾ

ಸಮಗ್ರ ನ್ಯೂಸ್‌ : ಮಂಡ್ಯದಲ್ಲಿ ಯಾರ ಪರ ಪ್ರಚಾರ ಮಾಡಬೇಕು ಅನ್ನೋದು ದರ್ಶನ್ ಅವರಿಗೆ ಬಿಟ್ಟ ವಿಚಾರ. ನಾನು ಸ್ಪರ್ಧೆ ಮಾಡಿದ್ರೆ ನನಗೆ ಸಪೋರ್ಟ್ ಮಾಡ್ತಾ ಇದ್ರು. ಆದ್ರೆ ಈಗ ನಾನು ಅಲ್ಲಿ ನಿಂತಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ.

Ad Widget . Ad Widget .

ಕಾಂಗ್ರೆಸ್‌ ಅಭ್ಯರ್ಥಿ ಪರ ದರ್ಶನ್ ಪ್ರಚಾರ ಮಾಡುತ್ತಿದ್ದಾರಲ್ವಾ ಎಂಬ ಪ್ರಶ್ನೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು.

Ad Widget . Ad Widget .

ಸುಮಲತಾ ಅವರೇ ದರ್ಶನ್ ನನ್ನು ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ಕಳಿಸಿದ್ದಾರೆ ಎಂಬುದು ಊಹಾಪೋಹ. ಅದನ್ನು ನಂಬಬೇಡಿ. ನಾನೇ ಕಳಿಸಿದ್ರೆ ನನಗೇ ಕಾಂಗ್ರೆಸ್‌ಗೆ ಸೇರಬಹುದಿತ್ತಲ್ವಾ? ಅಸೆಂಬ್ಲಿ ಚುನಾವಣೆಯಲ್ಲಿ ದರ್ಶನ್ ಮದ್ದೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು.

ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದರು. ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದರು. ಪಕ್ಷ ಮುಖ್ಯ ಅಲ್ಲ. ನಿಂತಿರುವ ವ್ಯಕ್ತಿ ಮುಖ್ಯ ಎಂದು ದರ್ಶನ್ ಹೇಳುತ್ತಾ ಬಂದಿದ್ದಾರೆ. ನಾನು ನನ್ನ ಸ್ವಇಚ್ಛೆಯಿಂದ ಬಿಜೆಪಿಗೆ ಬಂದಿದ್ದೇನೆ. ಬೇರೆ ಪಕ್ಷಕ್ಕೆ ಸಪೋರ್ಟ್ ಮಾಡು ಅಂತ ಹೇಳುವ ಪ್ರಶ್ನೆ ಬರಲ್ಲ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *