Ad Widget .

ವಿಜಯಪುರ : 4 ನೇ ಸೆಟ್ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಜಿಗಜಿಣಗಿ

ಸಮಗ್ರ ನ್ಯೂಸ್‌ : ರಾಜ್ಯದಲ್ಲಿ 2 ನೇ ಹಂತದಲ್ಲಿ‌ ನಡೆಯುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಶುಕ್ರವಾರ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಅವರು ಬಿಜೆಪಿ ಮಾಜಿ ಶಾಸಕರು ಹಾಗೂ ಮಹಿಳಾ ಮುಖಂಡರೊಂದಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ಎರಡು ಸೆಟ್ ನಾಮಪತ್ರ ಸಲ್ಲಿಸಿದರು.

Ad Widget . Ad Widget .

ಸಂಸದ ರಮೇಶ ಜಿಗಜಿಣಗಿ ಅವರು ಈಗಾಗಲೇ ಏ.16 ರಂದು ಬೃಹತ್ ಶೋಭಾಯಾತ್ರೆ ಮೂಲಕ‌ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಹಾಗೂ ಮುಖಂಡರೊಂದಿಗೆ ತೆರಳಿ ಅಂದು ಎರಡು‌ ಸೆಟ್ ನಾಮಪತ್ರ ಸಲ್ಲಿಸಿದ್ದರು.

Ad Widget . Ad Widget .

ಕೊನೆಯ ದಿನವಾದ ಶುಕ್ರವಾರ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ‌ ನೇತೃತ್ವದಲ್ಲಿ ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಅರುಣ್ ಶಹಾಪುರ ಅವರೊಂದಿಗೆ ಒಂದು ಸೆಟ್ ಹಾಗೂ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಪ್ನಾ ಕಣಮುಚನಾಳ ಅವರ ನೇತೃತ್ವದಲ್ಲಿ, ಬಿಜೆಪಿ ಮುಖಂಡರಾದ ಮಲ್ಲಮ್ಮ ಜೋಗೂರು, ಮಧು ಪಾಟೀಲ್, ಪ್ರಭಾವತಿ ಪಾಟೀಲ್, ಪದ್ಮಾವತಿ‌ ಗುಡಿ ಅವರೊಂದಿಗೆ ಎರಡನೇ ಸೆಟ್ ನಾಮಪತ್ರ ಸಲ್ಲಿಸಿದರು.

ರಮೇಶ ಜಿಗಜಿಣಗಿ ಅವರು ಎರಡೂ ದಿನ ಸೇರಿ ಒಟ್ಟು ನಾಲ್ಕು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.

Leave a Comment

Your email address will not be published. Required fields are marked *