ಲಖನೌ : ಶಾಲೆಯಲ್ಲಿ ಫೇಶಿಯಲ್ ಮಾಡಿಕೊಂಡ ಮುಖ್ಯೋಪಾಧ್ಯಾಯಿನಿ: ವಿಡಿಯೋ ವೈರಲ್‌

ಸಮಗ್ರ ನ್ಯೂಸ್: ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯೊಬ್ಬರು ಫೇಶಿಯಲ್ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ಘಟನೆ ಉತ್ತರ ಪ್ರದೇಶದ ಬಿಘಾಪುರ ಬ್ಲಾಕ್ ನ ದಂಡಮಾವು ಗ್ರಾಮದ ಪ್ರಾಥಮಿಕ ಶಾಳೆಯಲ್ಲಿ ನಡೆದಿದೆ.

Ad Widget ... ..

ಶಾಲಾ ಮುಖ್ಯೋಪಾಧ್ಯಾಯಿನಿ ಸಂಗೀತಾ ಸಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಫೇಶಿಯಲ್ ಮಾಡಿಕೊಂಡ ಶಿಕ್ಷಕಿ. ವಿದ್ಯಾರ್ಥಿಗಳಿಗೆ ಊಟ ತಯಾರಿಸುವ ಕೋಣೆಯಲ್ಲಿ ಫೇಶಿಯಲ್ ಮಾಡಿಕೊಳ್ಳುತ್ತಿರುವುದನ್ನು ಕಂಡು ಸಹಾಯಕ ಶಿಕ್ಷಕಿ ಅನಮ್ ಖಾನ್ ಅವರು ಇದನ್ನು ವಿಡಿಯೋ ಮಾಡಿದ್ದಾರೆ.

Ad Widget

ಇದರಿಂದ ಕೋಪಗೊಂಡ ಮುಖ್ಯ ಶಿಕ್ಷಕಿ ಸಂಗೀತಾ ಸಿಂಗ್, ಅನಮ್ ಖಾನ್ ಅವರನ್ನು ಹಿಗ್ಗಾಮುಗ್ಗಾ ಥಳಿಸಿ, ಆಕೆಯ ಕೈಯನ್ನು ಕಚ್ಚಿ ಗಾಯಗೊಳಿಸಿದ್ದಾರೆ. ಇನ್ನು ಸಂಗೀತ ಸಿಂಗ್ ಹಲ್ಲೆ ಮಾಡಿದ ವಿಡಿಯೋ ಹಾಗೂ ಫೇಶಿಯಲ್ ಮಾಡಿದ ವಿಡಿಯೋಗಳನ್ನು ಅನಮ್ ಖಾನ್ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ಬ್ಲಾಕ್ ನ ಶಿಕ್ಷಣಾಧಿಕಾರಿ ಸಂಗೀತಾ ಸಿಂಗ್ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ ಶಿಕ್ಷಕಿ ಅನಮ್ ಖಾನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಸಂಗೀತಾ ಸಿಂಗ್ ವಿರುದ್ಧ ಬಿಘಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಿಕ್ಕಿಬಿದ್ದಿದ್ದಕ್ಕಾಗಿ ಥಳಿಸಿದ್ದಾರೆ ಎಂದು ಶಾಲಾ ಸಹಾಯಕ ಶಿಕ್ಷಕಿಯಿಂದ ದೂರು ಬಂದಿದೆ. ಈ ಪ್ರಕರಣದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಘಾಪುರ ವೃತ್ತಾಧಿಕಾರಿ ಮಾಯಾ ರೈ ತಿಳಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Leave a Comment

Your email address will not be published. Required fields are marked *