ಸಮಗ್ರ ನ್ಯೂಸ್: ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿಯೇ ನಂ.1 ಸ್ಥಾನದತ್ತ ಹೆಜ್ಜೆಯಿಟ್ಟಿದ್ದು, ಚೀನಾವನ್ನು ಹಿಂದಿಕ್ಕಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. . ಭಾರತದ ಜನಸಂಖ್ಯೆ ಅಂದಾಜು 144 ಕೋಟಿ ದಾಟುತ್ತಿದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ.24ರಷ್ಟು 14ಕ್ಕಿಂತ ಕಡಿಮೆ ವಯೋಮಾನದವರು ಇರುವುದನ್ನು ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯಾ ಸ್ಥಿತಿಯ 2024 ರ ವರದಿ ಬಹಿರಂಗಗೊಳಿಸಿದೆ. ಭಾರತದ ಜನಸಂಖ್ಯೆ ಕಳೆದ 77 ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎಂದೂ ವರದಿ ಉಲ್ಲೇಖಿಸಿದೆ.
2011ರ ಜನಗಣತಿಯಲ್ಲಿ 121 ಕೋಟಿ ಇದ್ದ ಭಾರತದ ಜನಸಂಖ್ಯೆ 2024ರಲ್ಲಿ 144.17ಕೋಟಿ ತಲುಪಿ ಚೀನಾದ ಜನಸಂಖ್ಯೆಯಾದ 142.5 ಕೋಟಿಯನ್ನು ಹಿಂದಿಕ್ಕಿರುವುದು ಕಂಡುಬಂದಿದೆ.
ದೇಶದ ಜನಸಂಖ್ಯೆಯ ಪೈಕಿ ಶೇ.17ರಷ್ಟು 10ರಿಂದ 19 ವಯಸ್ಸಿನವರು, ಶೇ.26ರಷ್ಟು 10 ರಿಂದ 24 ವಯಸ್ಸಿನವರು, ಶೇ.68ರಷ್ಟು 15 ರಿಂದ 64 ವಯೋಮಾನದವರು ದ್ದಾರೆ. 65 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನವರ ಪ್ರಮಾಣ ಶೇ.7 ಆಗಿದೆ. ಭಾರತದಲ್ಲಿ ಪುರುಷರ ಜೀವಿತಾವಧಿ ಸರಾಸರಿ 71 ವರ್ಷಗಳಾಗಿದ್ದು, ಮಹಿಳೆಯರ ಜೀವಿತಾವಧಿ 74 ವರ್ಷ ಎಂದು ವರದಿ ಹೇಳಿದೆ.