Ad Widget .

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣದ ಕಾರಣವನ್ನು ಬಿಚ್ಚಿಟ್ಟ ಪೊಲೀಸ್ ಕಮಿಷನ‌ರ್ ರೇಣುಕಾ ಸುಕುಮಾರ

ಸಮಗ್ರ ನ್ಯೂಸ್‌ : ಬಿವಿಬಿ ಕಾಲೇಜು ಕ್ಯಾಂಪಸ್ ನಲ್ಲಿ ಯುವತಿ ಕೊಲೆ ಪ್ರಕರಣದ ಕಾರಣವನ್ನು ಹು-ಧಾ ಪೊಲೀಸ್ ಕಮಿಷನ‌ರ್ ರೇಣುಕಾ ಸುಕುಮಾರ ಬಿಚ್ಚಿಟ್ಟಿದ್ದಾರೆ. ಬಿಸಿಎಯಲ್ಲಿ ಮೃತ ಯುವತಿ ನೇಹಾ ಹಾಗೂ ಆರೋಪಿ ಫಯಾಜ್ ಲವರ್ ಎಂಬುದನ್ನು ಆರೋಪಿ ಬಾಯಿಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.

Ad Widget . Ad Widget .

ಬಿವಿಬಿ ಕ್ಯಾಂಪಸ್ ನಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, BCA ಯಲ್ಲಿ ಇಬ್ಬರು ಪ್ರೀತಿಸುತ್ತಿದ್ದರು. ಆದ್ರೆ ಇತ್ತೀಚಿಗೆ ನೇಹಾ ಫಯಾಜ್ ನನ್ನು ಅವೈಡ್ ಮಾಡುತ್ತಿದ್ದಳು. ಇದೇ ಕೊಲೆಗೆ ಕಾರಣ ಎಂದು ಆರೋಪಿ ಹೇಳಿದ್ದು, ಆತನ ಹೇಳಿಕೆಯಲ್ಲದೆ ಪೊಲೀಸರು ಎಲ್ಲಾ ಮೂಲಗಳಿಂದಲೂ ತನಿಖೆ ನಡೆಸುತ್ತಿದ್ದಾರೆ ಎಂದರು.

Ad Widget . Ad Widget .

ಆರೋಪಿ ಬೆಳಗಾವಿ ಜಿಲ್ಲೆಯವನಾಗಿದ್ದು, ಆತನ ತಂದೆ- ತಾಯಿ ಇಬ್ಬರು ಶಿಕ್ಷಕರು ಎಂಬುದು ಗೊತ್ತಾಗಿದೆ. ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದ. ಆದ್ರೆ ಒಂದೇ ಗಂಟೆಯ ಒಳಗೆ ಆರೋಪಿ ಬಂಧಿಸಲಾಗಿದೆ. ಈ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವವರ ಮೇಲೆ ನಿಗಾ ವಹಿಸಲಾಗಿದೆ. ಸಂಘಟನೆಗಳ ಜೊತೆ ಮಾತನಾಡುತ್ತೇವೆ ಎಂದರು.

Leave a Comment

Your email address will not be published. Required fields are marked *