Ad Widget .

ಒಪನ್ ಎಐಗೆ ಭಾರತದಲ್ಲಿ ಮೊದಲ ಉದ್ಯೋಗಿಯ ನೇಮಕ

ಸಮಗ್ರ ನ್ಯೂಸ್: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ಚಾಟ್ ಜಿಪಿಟಿ ಮಾತೃಸಂಸ್ಥೆ ಒಪನ್ ಎಐ ನೇಮಕ ಮಾಡಿಕೊಂಡಿದೆ.

Ad Widget . Ad Widget .

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಹೊಸ ಸರ್ಕಾರ ರಚನೆಯಾಗಲಿದ್ದು, ದೇಶದಲ್ಲಿ ಎಐ ನಿಯಮಗಳನ್ನು ಜಾರಿಗೆ ತರಲಿರುವ ಹಿನ್ನಲೆಯಲ್ಲಿ, ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಹಾಗೂ ಪಾಲುದಾರಿಕೆಯ ನೇತೃತ್ವ ವಹಿಸಲು ಪ್ರಾಗ್ಯ ಮಿಶ್ರಾ ಅವರನ್ನು ಮೈಕ್ರೋಸಾಫ್ಟ್ ಬೆಂಬಲಿತ ಒಪನ್ ಎಐ ನೇಮಕ ಮಾಡಿಕೊಂಡಿದೆ.

Ad Widget . Ad Widget .

39 ವರ್ಷದ ಮಿಶ್ರಾ, ಈ ಹಿಂದೆ ಟ್ರೂಕಾಲರ್‍ನಲ್ಲಿ ಸಾರ್ವಜನಿಕ ವ್ಯವಹಾರಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. 2018ರಲ್ಲಿ ಮೆಟಾದಲ್ಲಿ ತಪ್ಪು ಮಾಹಿತಿಗಳ ವಿರುದ್ಧ ಅವರು ವಾಟ್ಸಾಪ್ ಆಂದೋಲನ ಪ್ರಾರಂಭಿಸಿದ್ದರು. ವರದಿಗಳ ಪ್ರಕಾರ ಈ ತಿಂಗಳ ಕೊನೆಯಲ್ಲಿ ಮಿಶ್ರಾ ಒಪನ್ ಎಐ ಸೇರಲಿದ್ದಾರೆ.

Leave a Comment

Your email address will not be published. Required fields are marked *