Ad Widget .

ವಿಜಯಪುರ: ಕ್ಷೇತ್ರದ ಜನತೆಯ ಸೇವೆ ಮಾಡಲು ಅವಕಾಶ ಮಾಡಿಕೊಡಿ: ಶ್ರೇಯಸ್ ಎಂ ಪಟೇಲ್

ಸಮಗ್ರ ನ್ಯೂಸ್‌ : ಆಲೂರು – ಸಕಲೇಶಪುರ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ಕ್ಷೇತ್ರದ ಜನತೆಯ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ ಮನವಿ ಮಾಡಿದರು.

Ad Widget . Ad Widget .

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿರುವ ಬಿ,ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚುನಾವಣಾ ಪ್ರಚಾರ ಆರಂಭಿಸಿದರು. ಬೆಳಗ್ಗೆಯಿಂದ ರಾತ್ರಿಯ ವರೆಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ತಾಲೂಕಿನ ೧೫ ಗ್ರಾಮ ಪಂಚಾಯತಿಗಳಾದ ಹಂಚೂರು, ಗಂಜಿಗೆರೆ, ಮಗ್ಗೆ, ಕೆಂಚಮ್ಮನ ಹೊಸಕೋಟೆ, ಅಬ್ಬನ, ಪಾಳ್ಯ, ಮಡಬಲು,

Ad Widget . Ad Widget .

ತಾಳೂರು, ಕಣತೂರು ಹುಣಸವಳ್ಳಿ, ಕದಾಳು, ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಂದ್ರ ಸ್ಥಳಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ತಮ್ಮನ್ನು ಗೆಲ್ಲಿಸುವ ಮೂಲಕ ಸಾರ್ವಜನಿಕ ಸೇವೆ ಮಾಡಲು ಅವಕಾಶ ಮಾಡಿ ಕೊಡುವಂತೆ ಮತ ಯಾಚಿಸಿದ ಅವರು ವಿವಿಧ ಗ್ರಾಮಗಳ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಆಲೂರು ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮ್ಮ ಪಕ್ಷದ ಮುಖಂಡರು ಹಾಗೂ ನಾಯಕರು, ಕಾರ್ಯಕರ್ತರೊಡನೆ ಮತಯಾಚನೆ ಮಾಡುತ್ತಿದ್ದು, ಈ ಭಾಗದ ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಜನರೇ ವ್ಯಯಕ್ತಿಕ ವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ನಿರ್ಧರಿಸಿದ್ದಾರೆ.

ಈ ಭಾಗದ ಜನರು ಕೂಡ ಕಾಂಗ್ರೆಸ್ ಪಕ್ಷದ ಆಡಳಿತ ಹಾಗೂ ಗ್ಯಾರಂಟಿ ಗಳನ್ನು ನಂಬಿ ಪಕ್ಷದ ತತ್ವ ಸಿದ್ಧಾಂತಗಳನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ಹಾಗೂ ನಮಗೆ ಉತ್ತಮ ಬೆಂಬಲವನ್ನು ನೀಡುತ್ತಿದ್ದಾರೆ. ಜಿಲ್ಲೆಯ ಜನತೆ ಜೆಡಿಎಸ್ ಪಕ್ಷದ ಅಪ್ಪ ಮಕ್ಕಳ ಕುಟುಂಬ ರಾಜಕಾರಣದ ದಬ್ಬಾಳಿಕೆ, ಅಹಂಕಾರವನ್ನು ನೋಡಿ ಬದಲಾವಣೆ ಬಯಸುತ್ತಿದ್ದಾರೆ. ಮುಂದೆ ಜನರೇ ಅವರಿಗೆ ಉತ್ತರ ನೀಡುತ್ತಾರೆ.

ಈ ಬಾರಿ ನನನ್ನು ಗೆಲ್ಲಿಸಿದರೆ ನಿಮ್ಮ ಸೇವೆಯನ್ನು ಮಾಡಲು ಹಾಗೂ ಇಲ್ಲಿಯ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಕೆಲ ಗ್ರಾಮ ಪಂಚಾಯಿತಿಗಳ ಗ್ರಾ ಪಂ ಸದಸ್ಯರು ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್, ಹೆಮ್ಮಿಗೆ ಮೋಹನ್, ಸಣ್ಣ ಸ್ವಾಮಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್ ಎಸ್ ಶಿವಮೂರ್ತಿ, ಶಾಂತಕೃಷ್ಣ, ಟೀಕ್ ರಾಜ್ , ಎಂ ಹೆಚ್ ರಂಗೇಗೌಡ , ಶಾಂತಪ್ಪ, ರಂಗಯ್ಯ, ತಾಲೂಕು ಪ ಜಾತಿ /ಪಂಗಡ ಮೋರ್ಚಾ ಅಧ್ಯಕ್ಷ ಲೋಕೇಶ್ ಅಜ್ಜೇನಹಳ್ಳಿ, ಮಾಜಿ ಅಧ್ಯಕ್ಷ ರವಿ, ರವಿಕುಮಾರ್, ಶ್ರೀಕಾಂತ್, ಲೋಕೇಶ್ ಮಡಬಲು ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭ್ಯರ್ಥಿ ಶ್ರೇಯಸ್ ಪಾಟೀಲ್ ಪರ ಮತ ಪ್ರಚಾರ ಮಾಡಿ ಮತ ಯಾಚನೆ ಮಾಡಿದರು.

Leave a Comment

Your email address will not be published. Required fields are marked *